More

    ದುರ್ಗಕ್ಕೆ ಹಸಿರ ವಲಯದ ಹೆಗ್ಗಳಿಕೆ

    ಚಿತ್ರದುರ್ಗ: ಮಾ.24ರಿಂದ ಈವರೆಗೂ ಯಾವುದೇ ಕರೊನಾ ಪಾಸಿಟಿವ್ ಪ್ರಕರಣ ಕಾಣಿಸದೇ ಇರುವುದು ಜಿಲ್ಲೆ ಜನರ ನೆಮ್ಮದಿಗೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಚಿತ್ರದುರ್ಗವನ್ನು ಹಸಿರು ವಲಯವೆಂದು ಘೋಷಿಸಿದೆ.

    ಇದರಿಂದಾಗಿ ದೇಶದಲ್ಲಿ ಒಂದು ವೇಳೆ ಲಾಕ್‌ಡೌನ್ ಮುಂದುವರಿದರೂ ಜಿಲ್ಲೆ ಮಟ್ಟಿಗೆ ಮೇ 3ರ ನಂತರದಲ್ಲಿ ಲಾಕ್‌ಡೌನ್ ಇನ್ನಷ್ಟು ಸಡಿಲಗೊಳ್ಳುವ ಸಾಧ್ಯತೆ ಇದೆ.

    ಜಿಲ್ಲೆಯಲ್ಲಿ ಸೋಂಕು ಜಾಗೃತಿಗೆ ತೆಗೆದುಕೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಡಿಸಿ, ಎಸ್ಪಿ ಇತರೆ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ವಿಡಿಯೋ ಸಂವಾದದಲ್ಲಿ ಚರ್ಚಿಸಿದರು.

    ಲಾಕ್‌ಡೌನ್ ಮುಂದುವರಿದರೆ ಅಥವಾ ಹಸಿರು ವಲಯಕ್ಕೆ ಸೀಮಿತವಾಗಿ ಲಾಕ್‌ಡೌನ್ ತೆರವಾದರೆ ಅನುಸರಿಸಬೇಕಾದ ಮುನ್ನೆ ಚ್ಚರಿಕೆ ಕ್ರಮಗಳು ಕುರಿತಂತೆ ಸಮಾಲೋಚನೆ ನಡೆಸಿ,ಅಗತ್ಯ ಸಲಹೆ,ಸೂಚನೆಗಳನ್ನು ಸಿಎಂ ಕೊಟ್ಟಿದ್ದಾರೆ ಎಂದು ಸಭೆಯಲ್ಲಿದ್ದ ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

    ಡಿಸಿ ವಿನೋತ್ ಪ್ರಿಯಾ, ಜಿ.ರಾಧಿಕಾ, ಎಎಸ್ಪಿ ಮಹಾಲಿಂಗ ನಂದಗಾವಿ, ಜಿಪಂ ಸಿಇಒ ಎಸ್.ಹೊನ್ನಾಂಬ, ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts