More

    ಪರಿಸರ ಮಾನವನ ನಿಜ ಶಿಕ್ಷಕ

    ಚಿತ್ರದುರ್ಗ: ಪರಿಸರವೇ ಮಾನವನ ನಿಜ ಶಿಕ್ಷಕ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜು ವತಿಯಿಂದ ಮುರುಘಾ ಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಫಾರ್ಮಾ ದೀಕ್ಷಾ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ 250 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

    ಪರಿಸರವೇ ಮಾನವನಿಗೆ ನಿತ್ಯ ಶಿಕ್ಷಣ ನೀಡುತ್ತಲೇ ಇದೆ. ಪರಿಸರದ ಮುಂದೆ ಮಾನವ ಶೂನ್ಯ ಎಂದ ಶ್ರೀಗಳು, ಭವಿಷ್ಯದ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಔಷಧ ವಿಜ್ಞಾನ ಮಹತ್ವದ ಸ್ಥಾನ ಪಡೆಯಲಿದೆ ಎಂದು ತಿಳಿಸಿದರು.

    ಬೆಂಗಳೂರು ನಾರ್‌ವಿಚ್ ಕ್ಲಿನಿಕಲ್ ಸರ್ವೀಸಸ್‌ನ ಜನರಲ್ ಮ್ಯಾನೇಜರ್ ಡಾ.ರಾಜಾ ಅಗ್ನಿ ಹೋತ್ರಿ ಮಾತನಾಡಿ, ಫಾರ್ಮಸಿ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಆರು ಸೂತ್ರಗಳಾದ ನಿಷ್ಠೆ, ಕೌಶಲ, ಸಂಪರ್ಕ, ಸಮಯ ಪ್ರಜ್ಞೆ, ಸೇವೆ ಮತ್ತು ಒಳ್ಳೆಯ ನಡತೆ ಪಾಲಿಸಬೇಕು ಎಂದರು.

    ಔಷಧ ವಿಜ್ಞಾನ ಪದವೀಧರರಿಗೆ ಇರುವ ಉದ್ಯೋಗಾವಕಾಶಗಳ ಕುರಿತಂತೆ ಬೆಂಗಳೂರು ಎಂ.ಎಸ್.ರಾಮಯ್ಯ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಮನೋಜ್ ಕುಮಾರ್ ಮಾಹಿತಿ ನೀಡಿದರು.

    ವಿವಿಧ ವಿಷಯಗಳಲ್ಲಿ ಕಾಲೇಜಿಗೆ ರ‌್ಯಾಂಕ್ ತಂದು ಕೊಟ್ಟ 140ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಶ್ರೀಗಳು ಗೌರವಿಸಿದರು.

    ಅರ್ಗವ್ ಹೆಲ್ತ್‌ಕೇರ್ ನಿರ್ದೇಶಕ ಎಸ್.ಎಸ್.ಗುರುಮೂರ್ತಯ್ಯ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ ಉಪಸ್ಥಿತರಿದ್ದರು.

    ಪ್ರಾಂಶುಪಾಲೆ ಡಾ.ಡಿ.ಆರ್.ಭಾರತಿ ಸ್ವಾಗತಿಸಿದರು. ಡಾ.ಟಿ.ಎಸ್.ನಾಗರಾಜ್ ವಂದಿಸಿದರು. ವಿದ್ಯಾರ್ಥಿಗಳಾದ ಅಭಿಜ್ಞಾ ಮತ್ತು ಚೈತ್ರಾ ಪ್ರಾರ್ಥಿಸಿದರು. ರಕ್ಷಿತಾ ಮತ್ತು ರಂಜಿತಾ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts