More

    ಜಿಲ್ಲೆಯನ್ನು ಪ್ರವಾಸಿ ತಾಣವಾಗಿಸಿ

    ಚಿತ್ರದುರ್ಗ: ನಗರದ ಶ್ರೀ ಮುರುಘಾ ಮಠಕ್ಕೆ ಮಂಗಳವಾರ ಭೇಟಿ ನೀಡಿದ ಸಂಸದ ಎ.ನಾರಾಯಣಸ್ವಾಮಿ ಡಾ.ಶಿವಮೂರ್ತಿ ಮುರುಘಾ ಶರಣರೊಂದಿಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚಿಸಿದರು.

    ಕೋಟೆ, ಚಂದ್ರವಳ್ಳಿ, ಜೋಗಿಮಟ್ಟಿ, ಮುರುಘರಾಜೇಂದ್ರ ಮಠ, ಜಟ್ಟಿಂಗ ರಾಮೇಶ್ವರ ಸೇರಿದಂತೆ ಹಲವು ಸ್ಥಳಗಳ ಅಭಿವೃದ್ಧಿ ಪಡಿಸುವುದಾಗಿ ಶರಣರಿಗೆ ತಿಳಿಸಿದರು.

    ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಮೊದಲು ಪೂರ್ಣಗೊಂಡು ಚಿತ್ರದುರ್ಗಕ್ಕೆ ನೀರು ಬರಬೇಕು ಎಂದ ಶರಣರು, ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಿ. ಶ್ರೀ ಮಠ, ಚಂದ್ರವಳ್ಳಿ ಮತ್ತು ಕೋಟೆಯ ಅಭಿವೃದ್ಧಿಗೂ ಗಮನ ಹರಿಸಿ. ಕೇಂದ್ರ ಮತ್ತು ರಾಜ್ಯಸರ್ಕಾರದ ಮೇಲೆ ಒತ್ತಡ ತಂದು ಜಿಲ್ಲೆಯನ್ನು ಒಂದು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

    ಎಸ್.ಜೆ.ಎಂ.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಎಸ್‌ಜೆಎಂ ಕಾಲೇಜು ಪ್ರಾಚಾರ್ಯ ಪ್ರೊ.ರಮೇಶ್,ಆರ್.ಲಿಂಗರಾಜು ಮತ್ತಿತರರು ಇದ್ದರು.

    ಪಿಒಪಿಎಸ್‌ಕೆಗೆ ಭೇಟಿ: ನಗರದ ಪ್ರಧಾನ ಅಂಚೆ ಕಚೇರಿ ಹಾಗೂ ಅಲ್ಲಿರುವ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಸಂಸದರು ಭೇಟಿ ನೀಡಿ ಪರಿ ಶೀಲಿಸಿದರು. ಕೋವಿಡ್ ಸಮಯದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಹೇಗೆ ತಲುಪಿಸಲಾಯಿತು ಎಂಬ ಮಾಹಿತಿ ಪಡೆದರು. ಪಿಒಪಿಎಸ್‌ಕೆ ಕಾರ‌್ಯ ನಿರ್ವಹಣೆ ಪರಿಶೀಲಿಸಿದರು. ಅಂಚೆ ಕಚೇರಿ ಕಟ್ಟಡ ನವೀಕರಣ ಕಾಮಗಾರಿ ತ್ವರಿತಕ್ಕೆ ಗುತ್ತಿಗೆದಾರರಿಗೆ ಸೂಚಿಸುವುದಾಗಿ ತಿಳಿಸಿದರು.

    ಅಂಚೆ ಅಧೀಕ್ಷಕ ಓ.ವಿರುಪಾಕ್ಷಪ್ಪ, ಪೋಸ್ಟ್ ಮಾಸ್ಟರ್ ಕೆಂಪಲಕ್ಕಮ್ಮ, ಮಾರುಕಟ್ಟೆ ಅಧಿಕಾರಿ ವಿಜಯಕುಮಾರ್, ನಿರೀಕ್ಷಕ ಮನೋಜ್‌ಪಾಲ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts