More

    ಲಾಕ್‌ಡೌನ್ ಅವಧೀಲಿ ನರೇಗಾ ಸಹಕಾರಿ

    ಚಿತ್ರದುರ್ಗ: ಲಾಕ್‌ಡೌನ್ ಈ ಸಮಯದಲ್ಲಿ ಕೂಲಿಕಾರ್ಮಿಕರಿಗೆ ನರೇಗಾ ಯೋಜನೆ ಆಸರೆಯಾಗಿದೆ ಎಂದು ಜಿಪಂ ಸಿಇಒ ಎಸ್.ಹೊನ್ನಾಂಬ ತಿಳಿಸಿದ್ದಾರೆ.

    ಮಾ.24ರಿಂದ ಈವರೆಗೆ ಜಿಲ್ಲೆಯ 188 ಗ್ರಾಪಂಗಳ ವ್ಯಾಪ್ತಿ 4.03 ಲಕ್ಷ ಮಾನವ ದಿನಗಳನ್ನು ಸೃಜಿಸಿ, 10 ಕೋಟಿ ರೂ. ಕೂಲಿಯನ್ನು ಕೊಡಲಾಗಿದೆ. ಸ್ವಂತ ಜಿಲ್ಲೆಗೆ ಹಿಂತಿರುಗಿದ ವಲಸೆ ಕಾರ್ಮಿಕರಿಗೂ ಜಾಬ್‌ಕಾರ್ಡ್ ಕೊಡಲು ಜಿಪಂ ಕ್ರಮ ತೆಗೆದುಕೊಂಡಿದೆ.

    ಈಗಾಗಲೇ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳ ಪಟ್ಟಿಯಲ್ಲಿ ಜಿಲ್ಲೆಗೆ ವಾಪಸ್ ಬಂದ ಕುಟುಂಬ ಸದಸ್ಯರ ಹೆಸರಿದ್ದರೆ ಅಂಥವರಿಗೂ ಉದ್ಯೋಗ ನೀಡಲು ಸೂಚಿಸಲಾಗಿದೆ. ಈ ವರ್ಷ ನರೇಗಾದಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ಆರಂಭಿಸಿದ್ದು, ರೈತರು ವೈಯಕ್ತಿಕವಾಗಿ ಕೃಷಿಹೊಂಡ ಅಥವಾ ಬದು ನಿರ್ಮಾಣದಂಥ ಕಾಮಗಾರಿ ಕೈಗೊಳ್ಳಬಹುದೆಂದು ಮಾಹಿತಿ ನೀಡಿದ್ದಾರೆ.

    ನರೇಗಾ ಯೋಜನೆಯಡಿ ಸದ್ಯ ಜಿಲ್ಲೆಯಲ್ಲಿ 27 ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಪ್ರಸಕ್ತ ವರ್ಷ 75 ಲಕ್ಷ ಮಾನವ ದಿನಗಳ ಸೃಜನೆ ಹಾಗೂ ಅನುದಾನ 300 ಕೋಟಿ ರೂ. ಖರ್ಚಿನ ಗುರಿ ಇದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ತಿಳಿಸಿದ್ದಾರೆ.

    ಬದು ನಿರ್ಮಾಣ ಮಾಸಾಚರಣೆ: ಅಂತರ್ಜಲ ಅಭಿವೃದ್ಧಿಗಾಗಿ ಹೊಲ, ತೋಟಗಳಲ್ಲಿ ಬದು ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಒತ್ತು ನೀಡಲಾಗಿದ್ದು, ಜೂನ್ 18ರ ವರೆಗೆ ಈ ಸಂಬಂಧ ಮಾಸಾಚರಣೆ ಅಭಿಯಾನ ಆಯೋಜಿಸಲಾಗಿದೆ. ಜಿಲ್ಲೆಯ 55 ಜಲಾನಯನ ಪ್ರದೇಶಗಳನ್ನು ಇದಕ್ಕಾಗಿ ಗುರುತಿಸಲಾಗಿದೆ. ಮೊಳಕಾಲ್ಮೂರು ಹಾಗೂ ಹೊಸದುರ್ಗ ತಾಲೂಕುಗಳಲ್ಲಿ ಬದು ನಿರ್ಮಾಣಕ್ಕೆ ಚಾಲನೆ ದೊರೆತಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾಹಿತಿ ನೀಡಿದ್ದಾರೆ.

    ಕಾರ್ಮಿಕರಿಗೆ ದಿನವೊಂದಕ್ಕೆ 275 ರೂ. ಹಾಗೂ ಅವರು ಸಲಿಕೆ, ಗುದ್ದಲಿ ಇತ್ಯಾದಿ ಸಲಕರಣೆ ತೆಗೆದುಕೊಂಡು ಹೋಗಿದ್ದರೆ ಹೆಚ್ಚುವರಿಯಾಗಿ 10 ರೂ. ಕೂಲಿ ನೀಡಲಾಗುವುದು. ಕಾಮಗಾರಿ ಸ್ಥಳಗಳಲ್ಲಿ, ಕೂಲಿ ಕಾರ್ಮಿಕರಿಗೆ ಕೋವಿಡ್-19 ತಡೆ ನಿಟ್ಟಿನಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts