More

    ರಥಸಪ್ತಮಿಗೆ ಸೂರ್ಯ ನಮಸ್ಕಾರ ಮೆರುಗು

    ಚಿತ್ರದುರ್ಗ: ರಥಸಪ್ತಮಿ ಅಂಗವಾಗಿ ನಗರದ ಬರಗೇರಮ್ಮ ದೇವಾಲಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ನೂರಾರು ಯೋಗಾಸಕ್ತರು ಪಾಲ್ಗೊಂಡಿದ್ದರು.

    ಈ ವೇಳೆ ಹಲವು ಯೋಗಪಟುಗಳ 108 ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿಗೆ ವಿಶೇಷ ಮೆರಗು ನೀಡಿದರು.

    ಈ ವೇಳೆ ಮಾತನಾಡಿದ ಜಿಲ್ಲಾ ಪತಂಜಲಿ ಯೋಗ ತರಬೇತಿ ಸಮಿತಿ ಅಧ್ಯಕ್ಷ ಜಿ.ಶ್ರೀನಿವಾಸ್, ಆರೋಗ್ಯವಂಥ ಸಮಾಜದ ನಿರ್ಮಾಣಕ್ಕೆ ಯೋಗ ಸಹಕಾರಿ. ಯೋಗ ಶಿಕ್ಷಕರು ತರಬೇತಿಯೊಂದಿಗೆ ಪರಿಣತಿಯನ್ನೂ ಗಳಿಸಬೇಕು. ಕಲಿಕಾಸಕ್ತರ ಸಮಸ್ಯೆ ಆಲಿಸಿ ಬಗೆ ಹರಿಸಬೇಕು ಎಂದರು.

    ಜಿಲ್ಲಾ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಮಾತನಾಡಿ, ಯೋಗಾಭ್ಯಾಸದಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯ ನಮಸ್ಕಾರಕ್ಕೆ ನೀಡಲಾಗಿದೆ. ಇದರಿಂದ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಉಸಿರಾಟ ವ್ಯವಸ್ಥೆಯೂ ಸುಧಾರಿಸಲಿದೆ. ಭೂಮಿ ಸಕಲ ಜೀವ ರಾಶಿಗಳು ಚಟುವಟಿಕೆಗಳಿಗೂ ಸೂರ್ಯನಿಂದ ನಡೆಯುತ್ತವೆ. ಸೂರ್ಯನಿಲ್ಲದೆ ಪ್ರಕೃತಿ ಅಸ್ತಿತ್ವವೇ ಸಾಧ್ಯವಿಲ್ಲ. ಆದ್ದರಿಂದ ಸೂರ್ಯ ಆರಾಧನೆ ಅಗತ್ಯ ಎಂದು ತಿಳಿಸಿದರು.

    ಭಾರತ್ ಸ್ವಾಭಿಮಾನ್ ಟ್ರಸ್ಟ್‌ನ ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಕಾರ್ಯದರ್ಶಿ ಗುರುಮೂರ್ತಿ, ಸಹ ಕಾರ್ಯದರ್ಶಿ ಎಲ್.ಎಸ್.ಬಸವರಾಜ್, ಅನ್ನೇಹಾಳ್ ಪ್ರಸನ್ನಕುಮಾರ್, ಪತಂಜಲಿ ಯೋಗ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts