More

    ಲಾಕ್‌ಡೌನ್ ನಡುವೆ ಸಾಮೂಹಿಕ ವಿವಾಹ ಮಹೋತ್ಸವ

    ಚಿತ್ರದುರ್ಗ: ಲಾಕ್‌ಡೌನ್ ನಡುವೆ 2 ನೇ ಬಾರಿ ಸಾಮಾಜಿಕ ಅಂತರ ಪಾಲನೆ ಸಹಿತ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಮಂಗಳವಾರ ಶ್ರೀ ಮುರುಘಾ ಮಠದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆದಿದೆ.

    ನವ ಜೋಡಿಗಳನ್ನು ಆಶೀರ್ವದಿಸಿದ ಮಾತನಾಡಿದ ಶರಣರು, ಕರೊನಾ ಕಾಯಿಲೆ ಸಂಕಟ, ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸರಳ ವಾಗಿ ಕಲ್ಯಾಣ ಮಹೋತ್ಸವ ನೆರವೇರಿರುವುದು ದಾಖಲೆ. ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಬರುತ್ತದೆ. ಆದ್ದರಿಂದ ಪರಸ್ಪರ ಅಂತರ ಅನಿವಾರ‌್ಯ. ಜೀವವೊಂದಿದ್ದರೆ ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲ ಸಾಧಿಸಬಹುದು. ಬೇಕಾದುದ್ದನ್ನೆಲ್ಲ ಪಡೆಯಬಹುದು. ಜನರ ಜೀವದ ಬೆಲೆ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

    ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಪ್ರಶಾಂತ್, ವೀರಶೈವ ಸಮಾಜದ ಕಾರ‌್ಯದರ್ಶಿ ಪಟೇಲ್ ಶಿವಕುಮಾರ್ ಇದ್ದರು. ಈ ಸಂದರ್ಭದಲ್ಲಿ 4 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

    ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ‌್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮತ್ತಿತರರು ಇದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜಶಾಸ್ತ್ರಿ ನಿರೂಪಿಸಿದರು.

    ಹಿರಿಯ ಶ್ರೀಗಳ ಸ್ವರಣೆ: ಜಯವಿಭವ ಸ್ವಾಮೀಜಿ ಸ್ಮರಣೋತ್ಸವ ಅಂಗವಾಗಿ ಶರಣರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಲ್ಯಾಣ ಜಯವಿಭವ ಸ್ವಾಮೀಜಿ ಅವರಿಗೆ ಪ್ರಾಣಿಪಕ್ಷಿಗಳ ಮೇಲೆ ಅತ್ಯಂತ ಪ್ರೀತಿ ಇತ್ತು. ಕೃಷಿ, ಮಠ ಹಾಗೂ ನಿಸರ್ಗದೆಡೆ ಅಪಾರ ಕಾಳಜಿ ಹೊಂದಿದ್ದರು. ಶ್ರೀ ಗಳು ಪ್ರಖಾಂಡ ಪಂಡಿತರಾಗಿದ್ದು, ಅನೇಕ ಬಾರಿ ಜಯದೇವ ಶ್ರೀಗಳೊಂದಿಗೆ ವೈಚಾರಿಕ ಚಿಂತನೆ ಮಾಡುತ್ತಿದ್ದರು ಎಂದು ಶರಣರು ಸ್ಮರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts