More

    ವಿದೇಶದಿಂದ ಬರುವರ ಮೇಲೆ ಇರಲಿ ನಿಗಾ

    ಚಿತ್ರದುರ್ಗ: ಕರೊನಾ ಹಿನ್ನೆಲೆ ಜಿಲ್ಲೆಯ 79 ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದ್ದು, ವಿದೇಶದಿಂದ ಬರುವಂಥವರು ಸ್ವಯಂ ಪ್ರೇರಿತರಾಗಿ ಮಾಹಿತಿ ಕೊಡಬೇಕೆಂದು ಡಿಸಿ ಆರ್.ವಿನೋತ್ ಪ್ರಿಯಾ ಮನವಿ ಮಾಡಿದರು.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಶಂಕಾಸ್ಪದ ಪ್ರಕರಣಗಳಲ್ಲಿ ವ್ಯಕ್ತಿಗಳ ಗಂಟಲು ದ್ರವ ಹಾಗೂ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಬೇಕು ಎಂದರು.

    ರ‌್ಯಾಪಿಡ್ ರೆಸ್ಪಾನ್ಸ್ ತಂಡದವರು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿ ತಮ್ಮ ವ್ಯಾಪ್ತಿ ನಿಗಾದಲ್ಲಿರುವವರ ಪ್ರತಿ ದಿನದ ಸಂಪೂರ್ಣ ಮಾಹಿತಿಯನ್ನು ಸಂಜೆ 4 ಗಂಟೆಯೊಳಗೆ ತಾಲೂಕು ಅಧಿಕಾರಿಗಳು, ಜಿಲ್ಲಾ ಆರೋಗ್ಯಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

    ವಿದೇಶದಿಂದ ಬಂದವರು ಟ್ರಾವೆಲ್ ಹಿಸ್ಟರಿಯನ್ನು ಸರಿಯಾಗಿ ತಿಳಿಸಬೇಕು. ಜಿಲ್ಲೆಯ ಒಬ್ಬರು ಕೆನಡಾದಿಂದ ಬಂದಿದ್ದಾಗಿ ತಿಳಿಸಿದ್ದಾರೆ. ಆದರೆ, ಅವರು ಇಟಲಿಯಿಂದ ಹಿಂದಿರುಗಿದ್ದು, ಈ ರೀತಿ ಗೊಂದಲದ ಹೇಳಿಕೆ ನೀಡಬಾರದು. ಮನೆಯಲ್ಲಿ 14 ದಿನಗ ಕಾಲ ಪ್ರತ್ಯೇಕವಾಗಿರುವುದು ಐಚ್ಛಿಕ ಅಲ್ಲ ಕಡ್ಡಾಯ ಎಂದರು.

    ಅಗತ್ಯವಿದ್ದಲ್ಲಿ ಸಹಾಯವಾಣಿ ಸಂಖ್ಯೆ 104 ಅಥವಾ 1077ಕ್ಕೆ ಕರೆ ಮಾಡ ಬಹುದು. ಪ್ರತ್ಯೇಕತೆಗೆ ನಿರಾಕರಿಸುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ವಿದೇಶದಿಂದ ಜಿಲ್ಲೆಗೆ ಬಂದವರು ಅಥವಾ ಸೋಂಕು ಲಕ್ಷಣ ಹೊಂದಿರುವವರು ಮನೆ ಕ್ವಾರಂಟೈನ್ ಅಥವಾ ಐಸೋಲೇಷನ್ ವಾರ್ಡ್‌ನಲ್ಲಿರಲು ಹಿಂದೇಟು ಹಾಕಿದ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ನೆರವು ಪಡೆಯಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಡಿಎಚ್‌ಒ ಡಾ.ಪಾಲಾಕ್ಷ, ಜಿಪಂ ಸಿಇಒ ಎಸ್.ಹೊನ್ನಾಂಬ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರಂಗನಾಥ್, ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಜಯಮ್ಮ, ಆರೋಗ್ಯಾಧಿಕಾರಿಗಳಾದ ಡಾ.ರೇಣುಪ್ರಸಾದ್, ಡಾ.ವೆಂಕಟೇಶ್, ಡಾ.ಗಿರೀಶ್, ಡಾ.ಕುಮಾರಸ್ವಾಮಿ, ಡಾ.ಸಿ.ಕಂಬಾಳಿಮಠ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಆನಂದಪ್ಪ, ಜಿಲ್ಲಾ ಮೇಲ್ವಿಚಾರಣೆ ತಂಡದ ಹನುಮಂತಪ್ಪ, ಖಾಸಿಂಸಾಬ್, ಮೂಗಪ್ಪ, ಜಾನಕಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts