More

    ಜಿಲ್ಲಾದ್ಯಂತ ರಂಜಾನ್ ಆಚರಣೆ

    ಚಿತ್ರದುರ್ಗ: ಕರೊನಾ ಸಂಕಷ್ಟದ ಸಮಯದಲ್ಲಿ ರಂಜಾನ್ ಹಬ್ಬವನ್ನು ಸೋಮವಾರ ಮುಸ್ಲಿಮರು ಸರಳವಾಗಿ ಮನೆಯಲ್ಲೇ ಆಚರಿಸಿದರು.

    ನಗರದ ಮಸೀದಿಗಳಲ್ಲಿ ಅಲ್ಲಿಯ ಇಮಾಮ್, ಕಮಿಟಿ ಪ್ರಮುಖರ ಸಹಿತ ನಾಲ್ಕೈದು ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಿದರು. ಉಳಿದಂತೆ ಎಲ್ಲರೂ ಮನೆಗಳಲ್ಲಿ ಪ್ರಾರ್ಥನೆ ಮಾಡಿದರು.

    ನಗರದ ದಾವಣಗೆರೆ ರಸ್ತೆಯಲ್ಲಿರುವ ಈದ್ಗಾ ಮೈದಾನ ಹಾಗೂ ಚಂದ್ರವಳ್ಳಿ ಬಳಿ ಈ ಬಾರಿ ಸಾಮೂಹಿಕ ಪ್ರಾರ್ಥನೆ ಇರಲಿಲ್ಲ.

    ಧರ್ಮ ಗುರುಗಳು, ಮುಖಂಡರ ಮನವಿಗೆ ಸ್ಪಂದಿಸಿದ್ದ ಅನೇಕರು, ಹಲವು ಬಡವರಿಗೆ ಆಹಾರ್ ಕಿಟ್ ಮತ್ತಿತರ ನೆರವನ್ನು ನೀಡಿದರು.

    ಈ ಬಾರಿ ಹೊಸ ಬಟ್ಟೆ ಖರೀದಿ ಪ್ರಮಾಣವೂ ಕಡಿಮೆ ಇತ್ತು. ಪರಸ್ಪರ ಅಂತರವನ್ನು ಕಾಪಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.

    ಕರೊನಾ ಸೋಂಕನ್ನು ಪ್ರಪಂಚದಿಂದಲೇ ತೊಲಗಿಸುವಂತೆ, ಸಂಕಷ್ಟದಿಂದ ದೇಶವನ್ನು ಪಾರು ಮಾಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ನಗರದ ಜಾಮೀಯಾ ಮಸೀದಿ ಸಮಿತಿ ಅಧ್ಯಕ್ಷ ಇಕ್ಬಾಲ್ ಹುಸೇನ್ ತಿಳಿಸಿದರು.

    ಸರ್ಕಾರ ಮತ್ತು ವಕ್ಫ್ ಬೋರ್ಡ್ ಸೂಚನೆಯಂತೆ ಯಾರೂ ಮಸೀದಿ, ದರ್ಗಾ, ಈದ್ಗಾ ಮೈದಾನದ ಕಡೆ ಮುಸ್ಲಿಮರು ಸುಳಿಯದೇ ಕರೊನಾ ತಡೆ ವಿರುದ್ಧ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts