More

    ಗ್ರಾಹಕರ ಮನೆ ಬಾಗಿಲಿಗೆ ತರಕಾರಿ

    ಚಿತ್ರದುರ್ಗ: ನಗರದ ಜನರ ಮನೆ ಬಾಗಿಲಿಗೆ ತರಕಾರಿ ಮಾರಾಟ ಮಾಡುವ ಹಾಪ್‌ಕಾಮ್ಸ್ ವಾಹನಕ್ಕೆ ತೋಟಗಾರಿಕೆ ಇಲಾಖೆ ಕಚೇರಿ ಬಳಿ ಬುಧವಾರ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿದ ಅವರು, ಏ.14ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿ ಇರುತ್ತದೆ. ಧ್ವನಿವರ್ಧಕ ಹೊಂದಿರುವ ಒಂದು ವಾಹನದಲ್ಲಿ ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗದ ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆ 5.30ರಿಂದ ಸಂಜೆ 6ರ ವರೆಗೆ ಸಂಚರಿಸಲಿದೆ. ಸಾರ್ವಜನಿಕರಿಗೆ ವಿವಿಧ ಬಗೆಯ ತಾಜಾ ತರಕಾರಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಿದೆ ಎಂದರು.

    ಈ ವ್ಯವಸ್ಥೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತರೆ ಮಾರಾಟ ವಾಹನಗಳ ಸಂಖ್ಯೆ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿರುವ ಹಾಪ್‌ಕಾಮ್ಸ್ ಮಳಿಗೆಗಳಿಗೆ ದಿನದ 24 ಗಂಟೆ ವಹಿವಾಟು ನಡೆಸಲು ಅನುಮತಿ ಕೊಡಲಾಗಿದೆ ಎಂದು ತಿಳಿಸಿದರು.

    ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ ಮಾತನಾಡಿ, ಉತ್ತಮ ಗುಣಮಟ್ಟದ ಹಣ್ಣು, ತರಕಾರಿಯನ್ನು ನಿಗದಿತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುವುದು. ಗ್ರಾಹಕರು ಖರೀದಿ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

    ನಗರದ ತೋಟಗಾರಿಕೆ ಇಲಾಖೆ ಕಚೇರಿ ಬಳಿ, ವಿವೇಕಾನಂದ ನಗರ, ಜೆಸಿಆರ್ ಬಡಾವಣೆ, ಜಿಲ್ಲಾ ಆಸ್ಪತ್ರೆ, ಮಹಾವೀರ ನಗರ ಹಾಗೂ ದವಳಗಿರಿ ಬಡಾವಣೆಯಲ್ಲಿ ಹಾಪ್‌ಕಾಮ್ಸ್ ಮಳಿಗೆಗಳಿವೆ.

    ಹೊಳಲ್ಕೆರೆ, ಎಚ್.ಡಿ.ಪುರ, ಚಳ್ಳಕೆರೆ ಆಸ್ಪತ್ರೆ ಬಳಿ, ನಾಯಕನಹಟ್ಟಿ, ತಳಕು, ಪರಶುರಾಂಪುರ ಹಾಗೂ ಮೊಳಕಾಲ್ಮೂರು ಸೇರಿ ಜಿಲ್ಲೆಯಲ್ಲಿ 14 ಹಾಪ್‌ಕಾಮ್ಸ್ ಮಳಿಗೆಗಳಿವೆ ಎಂದರು.

    ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಎಸ್.ತಿಮ್ಮಾರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಎಸ್.ರವಿ, ನಿರ್ದೇಶಕ ಶ್ರೀಕಂಠನ್, ಕಾರ್ಯದರ್ಶಿ ಸುರೇಂದ್ರಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts