More

    ಸಂತ ಸೇವಾಲಾಲ್ ಸಮಾಜದ ಆಸ್ತಿ

    ಚಿತ್ರದುರ್ಗ: ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದ ಸಂತ ಸೇವಾಲಾಲ್ ಸೇವೆ ಅಜರಾಮರವಾಗಿ ಉಳಿದಿದೆ ಎಂದು ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಹೇಳಿದರು.

    ಜಿಲ್ಲಾಡಳಿತದಿಂದ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಸಮಾಂಭರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾಲಾಲ್ ಅವರ ಆದರ್ಶ ಸಮಾಜದ ನಿಜ ಆಸ್ತಿ ಎಂದು ಬಣ್ಣಿಸಿದರು.

    ಸೇವಾಲಾಲ್ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ. ಬಂಜಾರ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಮಾರ್ಗದಲ್ಲಿ ಸಾಗಬೇಕು ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಸದಸ್ಯ ಆರ್.ನಾಗೇಂದ್ರನಾಯ್ಕ ಮಾತನಾಡಿ, ಸೇವಾಲಾಲರು ಎಲ್ಲ ವರ್ಗದ ಜನರಿಗೆ ಸತ್ಯ, ಧರ್ಮ ಪಾಲನೆ ಕುರಿತು ಸಂದೇಶ ಸಾರಿದ್ದಾರೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪವಾಡ ಪುರುಷರಾಗಿದ್ದ ಸೇವಾಲಾಲರು ಪ್ರತಿ ಜೀವರಾಶಿಗೂ ಒಳಿತು ಮಾಡುವ ನಿಟ್ಟಿನಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು ಎಂದು ತಿಳಿಸಿದರು.

    ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ತಾಂಡಗಳಿಗೆ ಮೂಲ ಸೌಕರ್ಯ ಒದಗಿಸುತ್ತಿದೆ. ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಅವಶ್ಯವಿದ್ದು, ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. 250ಕ್ಕೂ ಹೆಚ್ಚು ಮನೆಗಳಿರುವ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

    ಸಾಹಿತಿ ಕೆ.ಮಂಜುನಾಯ್ಕ ಮಾತನಾಡಿ, ಕ್ರಿ.ಪೂ.4ನೇ ಶತಮಾನದಲ್ಲೇ ಬಂಜಾರ ಸಂಸ್ಕೃತಿ-ಸಂಸ್ಕಾರ ನಾಡಿನ ಎಲ್ಲೆಡೆ ಹೆಸರು ವಾಸಿಯಾಗಿದೆ. ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರಲ್ಲಿ ಸಂತ ಸೇವಾಲಾಲ್ ಅಗ್ರಗಣ್ಯರು. 1739ರಲ್ಲಿ ಜನಿಸಿದ ಇವರು ತಮ್ಮ 12ನೇ ವರ್ಷದಿಂದಲೇ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ವಿಶ್ವಪರ್ಯಟನೆಯ ಜ್ಞಾನದಿಂದ ಪವಾಡ ಪುರುಷರ ಪಟ್ಟ ಗಳಿಸಿದರು ಎಂದರು.

    ಶ್ರೀ ಹೆಂಕುಸಾದ್ ಸ್ವಾಮೀಜಿ, ಎಂಎಲ್‌ಸಿ ಜಯಮ್ಮ ಬಾಲರಾಜ್, ತಾಪಂ ಸದಸ್ಯ ಸುರೇಶ್ ನಾಯ್ಕ, ಎಡಿಸಿ ಸಿ.ಸಂಗಪ್ಪ, ಎಸಿ ವಿ.ಪ್ರಸನ್ನಕುಮಾರ್, ಜಿಲ್ಲಾ ಬಂಜಾರ ಸಂಘದ ಗೌರಾವಾಧ್ಯಕ್ಷ ಜಿ.ರಾಜನಾಯ್ಕ, ಜಿಲ್ಲಾಧ್ಯಕ್ಷ ಸತೀಶ್‌ಕುಮಾರ್ ನಾಯ್ಕ, ಸಾಹಿತಿ ಕೆ.ಮಂಜನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.

    ಕಾರ್ಯಕ್ರಮಕ್ಕೂ ನಗರದ ನೀಲಕಂಠೇಶ್ವರ ದೇವಾಲಯ ಬಳಿ ಸೇವಾಲಾಲ್ ಭಾವಚಿತ್ರ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts