More

    ಮೆಕ್ಕೆಜೋಳ, ಈರುಳ್ಳಿ ಖರೀದಿಗೆ ಒತ್ತಾಯಿಸಿ ಡಿಸಿಗೆ ಮನವಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ಮಕ್ಕೆಜೋಳ ಹಾಗೂ ಈರುಳ್ಳಿ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸುವಂತೆ ರೈತ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.

    ರಾಜ್ಯಹಾಲು ಒಕ್ಕೂಟ ಮಹಾ ಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕ್ವಿಂ.ಗೆ 1760 ಧಾರಣೆಯಂತೆ ರೈತರಿಂದ ನೇರ ಮೆಕ್ಕೆಜೋಳ ಖರೀದಿಗೆ ಆದೇಶಿಸಿದ್ದಾರೆ. ಬಹುತೇಕ ರೈತರು ಇನ್ನೂ ಮೆಕ್ಕೆಜೋಳ ಮಾರಾಟ ಮಾಡಿಲ್ಲ.

    ಕಳೆದ ಹಿಂಗಾರು ಹಂಗಾಮಿನ ಈರುಳ್ಳಿ ಕೊಯ್ಲಗಿದೆ. ಆದರೆ ಬೆಲೆ ಕುಸಿತದಿಂದಾಗಿ ಶೇ.50 ಈರುಳ್ಳಿ ನಾಶವಾಗಿದೆ. ಖರೀದಿದಾರರು ಅತ್ಯಂತ ಕಡಿಮೆ ದರದಲ್ಲಿ ಈರುಳ್ಳಿ ಖರೀದಿಸುವುದಾಗಿ ಹೇಳುತ್ತಿದ್ದಾರೆ. ರೈತರ ನೆರವಿಗೆ ಬರುತ್ತೇವೆಂದು ಸರ್ಕಾರ ಹೇಳಿದ್ದರೂ ಪ್ರಯೋಜನವಾಗಿಲ್ಲ.

    ಆದ್ದರಿಂದ ಈರುಳ್ಳಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವುದಾಗಿ ಸರ್ಕಾರ ಘೋಷಿಸಬೇಕು. ಮುಂಗಾರು ಪ್ರಾರಂಭವಾಗಿದ್ದು ರೈತರಿಗೆ ಅನುಕೂಲವಾಗಲು ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಹೂವಿನ ಬೆಳೆಗಾರರಿಗೆ ತಕ್ಷಣ ನಷ್ಟ ಪರಿಹಾರ ವಿತರಿಸಬೇಕೆಂದು ಆಗ್ರಹಿಸಿದರು.

    ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ಮುಖಂಡರಾದ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts