More

    ರಂಗಭೂಮಿ ಸಮಾಜದ ಕೈಗನ್ನಡಿ

    ಚಿತ್ರದುರ್ಗ: ನಾಟಕ ಮನೋರಂಜನೆಯೊಂದಿಗೆ, ಸಮಾಜದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಹೇಳಿದರು.

    ರಂಗ ಸೌರಭ ಕಲಾ ಸಂಘ ಹಾಗೂ ದೀವಿಗೆ ಎಜ್ಯುಕೇಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಭಾನುವಾರ ರಾತ್ರಿ ತರಾಸು ರಂಗಮಂದಿರದಲ್ಲಿ ಏರ್ಪಡಿಸಿದ್ದ ನೀನಾಸಂ ಮರು ತಿರುಗಾಟ-2020 ಕಲಾವಿದರು ಪ್ರದರ್ಶಿಸಿದ ಅಂತರಂಗ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.

    ನಾಟಕ ಮನಸ್ಸನ್ನು ಅರಳಿಸುತ್ತದೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಕಲಾಪ್ರಕಾರಗಳು ಸಮಾಜಕ್ಕೆ ಹೆಚ್ಚು ಪ್ರಸ್ತುತವಾಗಿವೆ. ನೀನಾಸಂ ರಂಗ ಶಿಕ್ಷಣದೊಂದಿಗೆ ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು.

    ಪ್ರಾಧ್ಯಾಪಕಿ ಡಾ.ಪ್ರೇಮಾ ಪಲ್ಲವಿ ಮಾತನಾಡಿ, ನಾಗರಿಕ ಪೂರ್ವ ಇತಿಹಾಸದಲ್ಲಿ ನಾಟಕಗಳ ಪಾತ್ರ ಮಹತ್ವದ್ದಾಗಿದೆ. ಮಾತು ಬಾರದ ಅಂದಿನ ದಿನಗಳಲ್ಲಿ ಸಂಜ್ಞೆಗಳೇ ಸಂವಹನ ಮಾಧ್ಯಮವಾಗಿತ್ತು. ನಂತರದಲ್ಲಿ ಸಂಭಾಷಣೆ, ಪಾತ್ರ, ರಂಗಸಜ್ಜಿಕೆ, ಬೆಳಕು, ತಾಂತ್ರಿಕ ಪರಿಕರಗಳೊಂದಿಗೆ ರಂಗಭೂಮಿ ಬೆಳವಣಿಗೆ ಕಂಡಿತು ಎಂದು ತಿಳಿಸಿದರು.

    ಆಂಗ್ಲ ಪ್ರಾಧ್ಯಾಪಕ ಎಂ.ವಿ.ನಾಗರಾಜ್ ಮಾತನಾಡಿ, ಚಿತ್ರದುರ್ಗದಲ್ಲಿ ನಾಟಕ ಪ್ರದರ್ಶನಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

    ಎಂ.ವಿ.ನಟರಾಜ್, ನಿರ್ಮಲಾ, ಕೆ.ಪಿ.ಎಂ.ಗಣೇಶಯ್ಯ, ಟಿ.ಎನ್.ಶ್ಯಾಮಲಾ, ಎಸ್.ಕೆ.ದೀಪಕ್, ಶ್ರೀನಿವಾಸ ಮಳಲಿ, ನವೀನ್‌ಕುಮಾರ್ ಮತ್ತಿತರರು ಇದ್ದರು.

    ಮಾರಿಸ್ ಮೆಟರ್‌ಲಿಂಕ್ ರಚನೆ, ಮಾಧವ ಚಿಪ್ಪಳಿ ಅನುವಾದ ಶಂಕರ ವೆಂಕಟೇಶ್ವರನ್ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts