More

    ನೈತಿಕ ಮೌಲ್ಯ ಮರು ಸ್ಥಾಪನೆ ಅಗತ್ಯ

    ಚಿತ್ರದುರ್ಗ: ಸಮಾಜದಲ್ಲಿ ಇಂದು ಮರೆಯಾಗುತ್ತಿರುವ ವಿಧೇಯತೆ, ನೈತಿಕ ಮೌಲ್ಯಗಳ ಪುನರುತ್ಥಾನಕ್ಕೆ ನಾವೆಲ್ಲರೂ ಶ್ರಮಿಸಬೇಕಿದೆ ಎಂದು ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಹೇಳಿದರು.

    ನಗರದ ದೇವರಾಜ ಅರಸು ಎಜುಕೇಷನ್ ಸೊಸೈಟಿ 35ನೇ ವಾರ್ಷಿಕೋತ್ಸವ‘ಡೆಸ್ಟಿನಿ-2020’ಸಾಂಸ್ಕೃತಿಕ ಹಾಗೂ ಸನ್ಮಾನದ 2ನೇ ದಿನದ ಶನಿವಾರ ಸಮಾರಂಭದಲ್ಲಿ ಮಾತನಾಡಿದರು.

    ಹಿಂದೆ ಗುರು, ಹಿರಿಯರನ್ನು ಗೌರವಿಸುವ ವಿಧೇಯತೆ ಯುವ ಜನರಲ್ಲಿತ್ತು. ಆದರೆ, ಇಂದು ಉತ್ತಮ ನಡವಳಿಕೆಗಳು ಕಣ್ಮರೆಯಾಗಿ, ಸಕರಾತ್ಮಕ ಚಿಂತನೆ ಬದಲು ನಕರಾತ್ಮಕ ಧೋರಣೆ ಹೆಚ್ಚಾಗುತ್ತಿದೆ. ಉತ್ತಮ ಶಿಕ್ಷಣದ ಮೂಲಕ ಉತ್ತಮ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವ ಹೊಣೆ, ಪಾಲಕರು, ಪೋಷಕರು ಹಾಗೂ ವಿದ್ಯಾಸಂಸ್ಥೆಗಳ ಮೇಲಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಎಂ.ಚಂದ್ರಪ್ಪ ಮಾತನಾಡಿ, ತಮ್ಮ ವಿದ್ಯಾಸಂಸ್ಥೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಫಲಿತಾಂಶ ಪಡೆಯುತ್ತಾ ಬಂದಿದೆ. ನಮ್ಮೆಲ್ಲ ವಿದ್ಯಾರ್ಥಿಗಳು ಶೇ.95ಕ್ಕೂ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗುತ್ತಿದ್ದಾರೆ. ಕಳೆದ ವರ್ಷ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ರಾಜ್ಯದ ಮೂರು ಸಂಸ್ಥೆಗಳಲ್ಲಿ ನಮ್ಮದೂ ಒಂದು. 2018-19ನೇ ಸಿಬಿಎಸ್ಸಿ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿ ದೇಶದಲ್ಲೇ 6ನೇ ರ‌್ಯಾಂಕ್ ಪಡೆದಿದ್ದಾನೆ ಎಂದು ತಿಳಿಸಿದರು.

    ಸಂಸ್ಥೆ ಆಡಳಿತಾಧಿಕಾರಿ ಎಚ್.ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಶಿಕ್ಷಣ ಸಂಯೋಜಕ ಆರ್.ಎಸ್.ರಾಜು, ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ತ್ರಿವಿಕ್ರಮ, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಸಂಸ್ಥೆ ಸಿಇಒ ರಘುಚಂದನ್ ಮತ್ತಿತರರು ಇದ್ದರು.

    ಸಂಸ್ಥೆ ವಿವಿಧ ಶಾಲಾ ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಚಾರ್ಯರು ಹಾಗೂ ಬೋಧಕರೇತರ ನೌಕರರು, ಕಟ್ಟಡ ನಿರ್ಮಾಣ ಗುತ್ತಿಗೆದಾರರನ್ನು ಈ ವೇಳೆ ಗೌರವಿಸಲಾಯಿತು. ಸಂಸ್ಥೆ ಶಾಲಾ ಕಾಲೇಜು ವಿವಿಧ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts