More

    ಜಿಲ್ಲಾ ಸಚಿವರ ವಿರುದ್ಧ ಹಕ್ಕುಚ್ಯುತಿ

    ಚಿತ್ರದುರ್ಗ: ಪರಶುರಾಮಪುರ ಬ್ಯಾರೇಜ್‌ಗೆ ಬಾಗಿನ ಸಮರ್ಪಣೆ ವೇಳೆ ಶಿಷ್ಟಾಚಾರ ಉಲ್ಲಂಘಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

    ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೂ.2ರಂದು ನನ್ನ ಕ್ಷೇತ್ರ ಚಳ್ಳಕೆರೆ ತಾಲೂಕಿನಲ್ಲಿ ಏರ್ಪಡಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯೆ ಹಾಗೂ ತಾಪಂ ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ ಎಂದು ದೂರಿದರು.

    ಕಾರ್ಯಕ್ರಮಕ್ಕೆ ಅರ್ಧ ಗಂಟೆ ಮುನ್ನ ತಹಸೀಲ್ದಾರ್ ಮತ್ತಿತರ ಅಧಿಕಾರಿಗಳಿಂದ ನನಗೆ ಫೋನ್ ಕರೆ ಬಂತು. ಆದರೆ, ರಘುಮೂರ್ತಿ ಬೇರೆ, ಶಾಸಕರೇ ಬೇರೆ. ನಾನು ಶಾಸಕ ಹುದ್ದೆಯ ಘನತೆ ಕಾಪಾಡಿಕೊಳ್ಳಲೇಬೇಕು ಎಂದರು.

    ಸಚಿವರು ಕಾರ್ಯ ಒತ್ತಡದಲ್ಲಿ ಇದ್ದಿದ್ದರೆ ಅವರ ಆಪ್ತ ಸಹಾಯಕರಿಂದ ಫೋನ್ ಮಾಡಿಸಬಹುದಾಗಿತ್ತು. ಆದರೆ, ಇದ್ಯಾವುದು ಆಗಿಲ್ಲ. ಈ ಕುರಿತು ಪಕ್ಷದ ವರಿಷ್ಠರ ಜತೆ ಚರ್ಚಿಸಿ ಸಚಿವರ ವಿರುದ್ಧ ಹಕ್ಯುಚ್ಯುತಿ ಮಂಡಿಸುವುದಾಗಿ ಹೇಳಿದ ಅವರು, ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕೋವಿಡ್-19 ಸೋಂಕು ಭೀತಿ ಸಂದರ್ಭ, ಸಚಿವರ ಕಾರ್ಯಕ್ರಮದಲ್ಲಿ ಪರಸ್ಪರ ಅಂತರ ಮರೆತು ಜನ ಸೇರಿಸಿದ್ದನ್ನು ಖಂಡಿಸಿದ ರಘುಮೂರ್ತಿ, ಈ ಕುರಿತಂತೆ ಜಿಲ್ಲಾಡಳಿತದ ಕ್ರಮ ಏನೆಂದು ಕಾದು ನೋಡುವುದಾಗಿ ಹೇಳಿದರು.

    ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಮಾಜಿ ಅಧ್ಯಕ್ಷ ರವಿಕುಮಾರ್, ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮಾಜಿ ಸದಸ್ಯ ಬಾಬುರೆಡ್ಡಿ, ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು, ಮುಖಂಡ ಡಿ.ಮೈಲಾರಪ್ಪ ಇದ್ದರು.

    ನಾನೊಬ್ಬನೇ ನೀರು ತಂದಿಲ್ಲ: ನನ್ನನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಟೀಕಿಸಿರುವುದು ಮನಸ್ಸಿಗೆ ಬಹಳ ನೋವುಂಟು ತಂದಿದೆ ಎಂದು ರಘುಮೂರ್ತಿ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟದ ಅರಿವಿದೆ. ನಾನೊಬ್ಬನೇ ನೀರು ತಂದಿದ್ದೇನೆ ಎಂದು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ಸಂಸದ ಎ.ನಾರಾಯಣಸ್ವಾಮಿ ಆಕ್ಟಿವ್ ಆಗಿ ಈ ಯೋಜನೆಯ ಅನುಷ್ಠಾನಕ್ಕೆ ಓಡಾಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts