More

    33 ಕಾಮಗಾರಿ

    ಚಿತ್ರದುರ್ಗ: ನಗರದಲ್ಲಿ ನಗರೋತ್ಥಾನ-3 ರಡಿ 29.75 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ 33 ಕಾಮಗಾರಿ ಕೈಗೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು ತಿಳಿಸಿದ್ದಾರೆ.

    4 ಪ್ರಮುಖ ವೃತ್ತಗಳನ್ನು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಮೃತ್‌ಸಿಟಿ ಯೋಜನೆ ಕುಡಿ ಯುವ ನೀರು ಪೂರೈಕೆ ಸುಧಾರಣೆ, ಪಾರ್ಕ್‌ಗಳ ಅಭಿವೃದ್ಧಿ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುತ್ತಿದೆ.

    ನಗರದ ಒನಕೆ ಓಬವ್ವ , ಮದಕರಿ, ಡಾ.ಅಂಬೇಡ್ಕರ್ ಹಾಗೂ ಗಾಂಧಿ ವೃತ್ತಗಳನ್ನು 2 ಕೋಟಿ ರೂ.ಅಧಿಕ ಮೊತ್ತದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಸ್ವಚ್ಛ ಸರ್ವೇಕ್ಷಣಾ ಕಾರ್ಯಕ್ರಮದಡಿ ಹಳೆ ಟೈರ್‌ಗಳನ್ನು ಬಳಸಿ ಗಿಡಗಳನ್ನು ಸಂರಕ್ಷಿಸಲಾಗುತ್ತಿದೆ.

    ಅಮೃತ್ ಸಿಟಿ ಯೋಜನೆಯಡಿ ಯೂನಿಯನ್ ಪಾರ್ಕ್, ಕೆಳಗೋಟೆ, ಹೌಸಿಂಗ್ ಬೋರ್ಡ್ ಕಾಲನಿ, ರಾಜೇಂದ್ರನಗರ, ಐಯುಡಿಪಿ ಲೇಔಟ್ ಸೇರಿದಂತೆ 5 ಪಾರ್ಕ್‌ಗಳನ್ನು 3 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 19 ಕೋಟಿ ರೂ.ವೆಚ್ಚದಲ್ಲಿ ಕೈಗೊಂಡಿರುವ 7 ರಾಜಕಾಲುವೆಗಳ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ.

    ಅಮೃತ್ ಸಿಟಿ ಯೋಜನೆಯಡಿ 120 ಕೋಟಿ ರೂ.ವೆಚ್ಚದಲ್ಲಿ ನಗರಕ್ಕೆ ಶಾಂತಿಸಾಗರ ಹಾಗೂ ವಾಣಿವಿಲಾಸ ಸಾಗರದಿಂದ ದಿನದ 24 ಗಂಟೆ ಕುಡಿವ ನೀರು ಪೂರೈಸಲಾಗುವುದು. ನಗರದ 27 ಸಾವಿರ ಮನೆಗಳಿಗೆ 6 ತಿಂಗಳ ಒಳಗೆ ಕುಡಿವ ನೀರು ಸಂಪರ್ಕಕ್ಕೆ ಮೀಟರ್ ಅಳವಡಿಸಲಾಗುವುದು. ನಗರದಲ್ಲಿ ಅಕ್ರಮವೆಂದು ಗುರುತಿಸಿದ್ದ 2131 ನಲ್ಲಿ ಸಂಪರ್ಕಗಳ ಪೈಕಿ 181 ಸಕ್ರಮಗೊಳಿಸಲಾಗಿದೆ.

    ಶಾಂತಿ ಸಾಗರದಿಂದ ನಗರಕ್ಕೆ ನೀರು ಪೂರೈಕೆ ಯೋಜನೆಯಡಿ 22 ಗ್ರಾಮಗಳೂ ನೀರು ಪಡೆದುಕೊಳ್ಳುತ್ತಿದ್ದು, ಅಂದಾಜು 10 ಕೋಟಿ ರೂ. ಹೆಚ್ಚಿನ ನಿರ್ವಹಣಾ ಮೊತ್ತ ಸ್ಥಳೀಯ ಸಂಸ್ಥೆಗಳಿಂದ ಬರಬೇಕಿದೆ. ನಗರಸಭೆ 176 ಹೊರಗುತ್ತಿಗೆ ಪೌರಕಾರ್ಮಿಕರು ಹಾಗೂ ವಾಹನ ಚಾಲಕರಿಗೆ ಹಲವು ಸವಲತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts