More

    ರೈತನಿಗೆ ವಂಚಿಸಿದ ಐವರಿಗೆ ಶಿಕ್ಷೆ

    ಚಿತ್ರದುರ್ಗ: ಟ್ರಾೃಕ್ಟರ್‌ಗಾಗಿ ಬ್ಯಾಂಕ್‌ನಲ್ಲಿ ಸಾಲ ಮಂಜೂರು ಮಾಡಿಸಿ ರೈತನಿಗೆ ನೀಡದೇ ವಂಚಿಸಿದ್ದ ಐವರು ಅಪರಾಧಿಗಳಿಗೆ ಮೂವರು ವರ್ಷ ಜೈಲು, 1.50 ಲಕ್ಷ ರೂ. ದಂಡ ವಿಧಿಸಿ ನಗರದ 2ನೇ ಅಪರ ಹಿರಿಯ ಸಿಜೆ ಮತ್ತು ಜೆಎಂಎಫ್ ಕೋರ್ಟ್ ತೀರ್ಪು ನೀಡಿದೆ.

    ಬ್ಯಾಂಕ್ ನೌಕರರಾದ ಸಿ.ಎಂ.ಶಾಂತವೀರಯ್ಯ, ರಾಜೇಂದ್ರ, ಬಸವರಾಜಪ್ಪ ಹಾಗೂ ಖಾಸಗಿ ಕಂಪನಿ ಸಿಬ್ಬಂದಿ ಬಿ.ಆರ್.ರವಿ, ಮಂಜುನಾಥ 2006 ಮಾರ್ಚ್ 1ರಿಂದ 2008 ಜೂನ್ 1ರ ಅವಧಿಯಲ್ಲಿ ಟ್ರಾೃಕ್ಟರ್ ಕೊಡಿಸುವುದಾಗಿ ಹೇಳಿ ನನಗೆ ಮೋಸ ಮಾಡಿದ್ದಾರೆ ಎಂದು ಕುಂಚಿಗನಾಳ್‌ನ ಯಳಿಯಪ್ಪ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಐವರು 5,98,500 ರೂ. ಸಾಲ ಮಂಜೂರು ಮಾಡಿಸಿ, ಟ್ರಾೃಕ್ಟರ್ ನನ್ನ ಹೆಸರಿಗಿದೆ ಎಂಬಂತೆ ಸಾರಿಗೆ ಇಲಾಖೆ ದಾಖಲೆಗಳನ್ನು ಸೃಷ್ಟಿಸಿ ಟ್ರಾೃಕ್ಟರ್ ಕೊಡದೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.

    ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದ ಪಿಎಸ್‌ಐ ಎಸ್.ಎನ್.ಜಯರಾಂ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎಂ.ದೇವರಾಜು ಅವರು, ಮೃತ ಆರೋಪಿ ಮಹೇಶ್ ಹೊರತು ಪಡಿಸಿ ಉಳಿದ ಐವರು ಅಪರಾಧಿಗಳಿಗೆ ಶಿಕ್ಷೆ, ದಂಡ ವಿಧಿಸಿದ್ದಾರೆ.

    ದಂಡ ಹಣದಲ್ಲಿ ಅರ್ಧ ಮೊತ್ತವನ್ನು ರೈತನಿಗೆ ಕೊಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಕೆ.ತಿಪ್ಪೇಸ್ವಾಮಿ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts