More

    ಕಲೆ ಉಳಿವಿಗೆ ಬೇಕು ಸರ್ವರ ಸಹಕಾರ

    ಚಿತ್ರದುರ್ಗ: ಸರ್ವರ ಸಹಕಾರ, ಪ್ರೊತ್ಸಾಹ ದೊರೆತಾಗ ಮಾತ್ರ ಯಾವುದೇ ಕಲೆ ಉಳಿದು, ಬೆಳೆದು, ಎಲ್ಲೆಡೆ ಪಸರಿಸಲು ಸಾಧ್ಯ ಎಂದು ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್ ಹೇಳಿದರು.

    ನಗರದ ಸ್ವರಾತ್ಮಿಕಾ ಸಂಗೀತ ಶಾಲೆ ಹಾಗೂ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಶನಿವಾರ ರಾತ್ರಿ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ದಾಸ ಶ್ರೇಷ್ಠ ಶ್ರೀ ಪುರಂದರದಾಸರು, ನಾದಬ್ರಹ್ಮ ಶ್ರೀ ತ್ಯಾಗರಾಜರ ಆರಾಧನಾ ಹಾಗೂ ವಿದ್ಯಾರ್ಥಿ ಪ್ರತಿಭಾದರ್ಶನ ಮತ್ತು ಸಂಗೀತ ಸಮಾರಾಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಗರದಲ್ಲಿರುವ ಎಲ್ಲ್ಲ ಸಂಗೀತ ಶಾಲೆಗಳು ಸೇರಿ ಆರಾಧನಾ ಮತ್ತು ಸಂಗೀತ ಸಮಾರಾಧನಾ ಮಾಡಿದರೆ ಇನ್ನು ಹೆಚ್ಚು ಶೋಭಾಯಮಾನವಾಗಿರುತ್ತದೆ. ಇದರಿಂದ ಹೆಚ್ಚು ಸಂಗೀತಾಸಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದರು.

    ಜೆಸಿಆರ್ ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಜಿ.ಆರ್.ಕೃಷ್ಣಮೂರ್ತಿ ಮಾತನಾಡಿ, ಸ್ವರಾತ್ಮಿಕಾ ಸಂಗೀತ ಶಾಲೆ ಅನೇಕ ವರ್ಷಗಳಿಂದಲೂ ಎಲ್ಲ ವಯೋಮಾನದವರಿಗೂ ಸಂಗೀತ ಕಲಿಸುತ್ತಾ ಕಲಾಲೋಕಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.

    ಬ್ರಾಹ್ಮಿ ಸಂಸ್ಥೆ ಕಾರ್ಯದರ್ಶಿ ಪಿ.ಎಂ.ರುದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಮುರಾ ಕಲಾಲೋಕದ ರಂಗ ಕಲಾವಿದ ಎಸ್.ರಂಗಸ್ವಾಮಿ ಅವರನ್ನು ಗೌರವಿಸಲಾಯಿತು.

    ಸ್ವರಾತ್ಮಿಕಾ ಸಂಗೀತ ಶಾಲೆಯ ಚಂಪಕಾ ಶ್ರೀಧರ್ ಮತ್ತು ತಂಡದವರು ತ್ಯಾಗರಾಜರ ಪಂಚರತ್ನ ಕೀರ್ತನೆಗಳ ಹಾಡಿದರು. ಜ್ಯೋತಿ, ರುಕ್ಮಿಣಿ, ವಿಜಯಲಕ್ಷ್ಮೀ, ಶಕುಂತಲಾ, ಭಾರತಿ, ಮಂಜುಳಾ, ಕಾಮೇಶ್ವರಿ, ಸೋಮಲತಾ ಮೊದಲಾದವರು ದೇವರ ನಾಮ, ಪುರಂದರ ದಾಸರು, ತ್ಯಾಗರಾಜರು ಹಾಗೂ ದಾಸವರೇಣ್ಯರ ಕೀರ್ತನೆಗಳನ್ನು ಹಾಡಿದರು.

    ವಿದ್ವಾನ್ ವಿವೇಕ ಕೃಷ್ಣ ಮತ್ತೂರು ವಯೋಲಿನ್, ವಿದ್ವಾನ್ ರಾಜೀವ ಮತ್ತೂರು ಮೃದಂಗದ ಸಾಥ್ ನೀಡಿದರು. ಸಂಜೆ ಸಮಾರೋಪದಲ್ಲಿ 40ಕ್ಕೂ ಹೆಚ್ಚು ಕಲಾವಿದರು ಕೀಚಕ ವಧೆ ನೃತ್ಯ ರೂಪಕ ಪ್ರದರ್ಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts