ಮಾಟ ಮಾಡಿಸಿದ್ದನೆಂಬ ಶಂಕೆಗೆ ಕೊಲೆ

blank
blank

ಚಿತ್ರದುರ್ಗ: ಮಾಟ, ಮಂತ್ರ ಮಾಡಿಸಿ ತೊಂದರೆ ಕೊಡುತ್ತಿದ್ದಾನೆಂಬ ಶಂಕೆಯಿಂದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆತನನ್ನು ಕೊಲೆ ಮಾಡಿದ ಆರೋಪದಡಿ ಪಗಡಲಬಂಡೆ ಗ್ರಾಮದ ಮಂಜುನಾಥ ಎಂಬಾತನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಚಳ್ಳಕೆರೆ ತಾಲೂಕು ಹರವಿಗೊಂಡನಹಳ್ಳಿ ಜಮೀನೊಂದರಲ್ಲಿ ಇದ್ದಿಲು ಸುಡುವ ಕೆಲಸ ಮಾಡುತ್ತಿದ್ದ ಚಂದ್ರಣ್ಣ ಎಂಬಾತನನ್ನು ಡಿ.4ರ ರಾತ್ರಿ ಕೊಲೆ ಮಾಡಲಾಗಿತ್ತು.

ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಂದ್ರಣ್ಣ ಮತ್ತು ಆತನ ನಡುವಿನ ಹತ್ತಾರು ವರ್ಷಗಳ ವೈಷಮ್ಯ ಬಯಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದರು.

ಈ ಕುರಿತಂತೆ ಇವರಿಬ್ಬರ ನಡುವೆ ಅನೇಕ ಬಾರಿ ಜಗಳವೂ ಆಗಿತ್ತು. ನನ್ನ ಪ್ರಗತಿ ಸಹಿಸದೆ ನಮ್ಮಗಳ ವಿರುದ್ಧ ಮಾಟ ಮಂತ್ರಗಳನ್ನು ಮಾಡಿಸುವುದನ್ನು ಮುಂದುವರಿಸಿದ್ದಾನೆಂಬ ಶಂಕೆಯಿಂದ ಅವನನ್ನು ಕೊಲೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.

ಪ್ರಕರಣದ ತನಿಖೆಗೆ ಡಿವೈಎಸ್ಪಿ ಎಸ್.ರೋಷನ್ ಜಮೀರ್, ಸಿಪಿಐ ಆನಂದ, ಪಿಎಸ್‌ಐ ಡಿ.ಶಿವಕುಮಾರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು ಎಂದರು.

Share This Article

ಪೈಲ್ಸ್​ ಇರುವವರು ಈ ಆಹಾರಗಳನ್ನು ಬಿಟ್ಟುಬಿಡಿ! ಸಮಸ್ಯೆಯಿಂದ ಹೊರಬರಲು ಇಲ್ಲಿವೆ ಉಪಯುಕ್ತ ಸಲಹೆ | Piles

Piles: ಮೂಲವ್ಯಾಧಿ ಅಥವಾ ಪೈಲ್ಸ್​ ಸಮಸ್ಯೆ ಬಹುಜನರಲ್ಲಿ ಕಾಡುವ ತೀರ ಸಾಮಾನ್ಯ ರೋಗ. ಅದರಲ್ಲೂ ಇಂದಿನ…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ! ಯಾವ ಆರೋಗ್ಯ ಸಮಸ್ಯೆನೂ ಬರಲ್ಲ.. curry leaves water

ಬೆಂಗಳೂರು: ( curry leaves water )  ನೀವು ಕೂಡ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು…