More

    26ಕ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಚಿತ್ರದುರ್ಗ: ಬೆಂಗಳೂರಿನಲ್ಲಿ ೆ.26ರಿಂದ ಮಾ.4ರ ವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ತಿಳಿಸಿದರು.

    ರಾಜ್ಯ ಸರ್ಕಾರ, ಚಲನಚಿತ್ರ ಅಕಾಡೆಮಿ, ಚಲನಚಿತ್ರ ವಾಣಿಜ್ಯ ಮಂಡಳಿ, ವಾರ್ತಾ ಇಲಾಖೆಯಿಂದ ಆಯೋಜಿಸಿರುವ 12ನೇ ಆವೃತ್ತಿಯ ಚಲನಚಿತ್ರೋತ್ಸವವನ್ನು ೆ.26ರಂದು ಕಂಠೀರವ ಸ್ಟುಡಿಯೋದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    . ಮಾ.4ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾರೋಪ ನಡೆಯಲಿದ್ದು, ರಾಜ್ಯಪಾಲರು ಭಾಷಣ ಮಾಡುವರು. ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿ ಮತ್ತಿತರ ಭಾಷೆಗಳ ನಟ, ನಟಿಯರು, ತಂತ್ರಜ್ಞರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಮುಂದಿನ ದಿನಗಳಲ್ಲಿ ಮೈಸೂರು, ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗದಂತಹ ಜಿಲ್ಲೆಗಳಲ್ಲಿ ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ, ಗೋಷ್ಠಿ ಆಯೋಜಿಸುವ ಚಿಂತನೆಯಿದೆ ಎಂದು ತಿಳಿಸಿದರು.

    ಕನ್ನಡ ಚಲನಚಿತ್ರದ ಬಗ್ಗೆ ಹೆಮ್ಮೆ ಎನಿಸುತ್ತದೆ. ಉತ್ತಮ ಚಲನಚಿತ್ರ ಹಾಗೂ ಡಾಕುಮೆಂಟರಿಗಳನ್ನು ಸಂಗ್ರಹಿಸಿಡಲು ಜಾಗದ ಕೊರತೆಯಿದೆ. ಹಾಗಾಗಿ ಮ್ಯೂಸಿಯಂ ಮಾಡಿ ಅದರಲ್ಲಿ ಶೇಖರಣೆ ಮಾಡುವ ಚಿಂತನೆ ಎಂದು ತಿಳಿಸಿದರು.

    ಹಿಂದೆ ಜನತಾ ಬಜಾರ್ ಮೂಲಕ ಪ್ರತಿ ಊರುಗಳಲ್ಲಿ ಸದಭಿರುಚಿ ಸಿನಿಮಾ ತೋರಿಸಲಾಗುತ್ತಿತ್ತು. ಆದರೆ, ಅದು ಯಶಸ್ಸು ಕಾಣಲಿಲ್ಲ. ಪ್ರತಿ ಜಿಲ್ಲೆಗಳ ಬಸ್ ನಿಲ್ದಾಣ ಅಥವಾ ಬೇರೆ ಕಡೆಗಳಲ್ಲಿ ಮಿನಿ ಥಿಯೇಟರ್ ನಿರ್ಮಿಸಿ ಅಂತಹ ಚಿತ್ರಗಳನ್ನು ಪ್ರದರ್ಶಿಸುವ ಆಸೆಯಿದೆ. ನನ್ನ ಅವಧಿಯಲ್ಲಿ ಈ ಕೆಲಸ ಮಾಡುವ ಪ್ರಯತ್ನ ಮಾಡುತ್ತೇನೆ. ಅಲ್ಲದೇ ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಗ್ಗೆ ಯುವ ಜನತೆಗೆ ತರಬೇತಿ ಕೊಡಿಸುವ ಚಿಂತನೆ ಇದೆ ಎಂದು ಹೇಳಿದರು.

    200 ಚಲನಚಿತ್ರಗಳ ಪ್ರದರ್ಶನ: ಒಟ್ಟು 11 ಪರದೆಗಳಲ್ಲಿ 50 ದೇಶಗಳ 200 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಎಂಟು ದಿನ ನಡೆಯುವ ಚಲನಚಿತ್ರೋತ್ಸವದಲ್ಲಿ ಗೋಷ್ಠಿ, ವಿಚಾರ ಸಂಕಿರಣ ನಡೆಯಲಿವೆ. ದೇಶ, ವಿದೇಶಗಳ ಪರಿಣಿತರು ಭಾಗವಹಿಸಲಿದ್ದಾರೆ ಎಂದು ಪುರಾಣಿಕ್ ಹೇಳಿದರು. ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛ ಪರಿಸರಕ್ಕಾಗಿ ಗೋ ಗ್ರೀನ್ ಉತ್ಸವ ಕೂಡ ನಡೆಸಲಾಗುತ್ತಿದೆ. ಹಿರಿಯ ನಟ ಅನಂತನಾಗ್ ಅವರ ಏಳೆಂಟು ಉತ್ತಮ ಚಲನಚಿತ್ರಗಳ ಪ್ರದರ್ಶನ ಇರುತ್ತದೆ. ಮಾರ್ಕೆಟಿಂಗ್ ಬಜಾರ್ ಇದ್ದು, ಮಾದರಿ ಹಾಗೂ ಉತ್ತಮ ಚಲನಚಿತ್ರಗಳ ಪ್ರದರ್ಶನ ನಡೆಸಲಾಗುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts