More

    ಹೊರಗಿನಿಂದ ಓಡಾಡುವವರ ವಿರುದ್ದ ಡಿಸಿ ಗರಂ

    ಚಿತ್ರದುರ್ಗ: ಕೇಂದ್ರ ಸ್ಥಾನದಲ್ಲಿರದೇ ದಾವಣಗೆರೆ ಮತ್ತಿತರ ಕಡೆಗಳಿಂದ ಚಿತ್ರದುರ್ಗಕ್ಕೆ ಬಂದು ಹೋಗುವ ಸರ್ಕಾರಿ ಅಧಿಕಾರಿ-ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆಗೆ ಶಿಫಾರಸು ಮಾಡುವುದಾಗಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಎಚ್ಚರಿಸಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಲೇ ಪರಸ್ಥಳದಿಂದ ಓಡಾಡುತ್ತಿರುವವರ ಪಟ್ಟಿ ಸಿದ್ಧಪಡಿಸಲಾಗಿದೆ. ಇದು ಕೊನೆಯ ಎಚ್ಚರಿಕೆ ಎಂದು ಹೇಳಿದರು.

    ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದಿದ್ದರೆ 100 ರೂ. ದಂಡ ವಿಧಿಸಲಾಗುವುದು. ಸಬ್ ಇನ್ಸ್‌ಪೆಕ್ಟರ್, ಪಿಡಿಒ ದರ್ಜೆ ಅಧಿಕಾರಿಗಳಿಗೆ ಹಾಗೂ ಆರೋಗ್ಯ ನಿರೀಕ್ಷಕರಿಗೆ ದಂಡ ವಿಧಿಸುವ ಅಧಿಕಾರ ಕೊಡಲಾಗಿದೆ. ಹಸಿರು ವಲಯದಲ್ಲಿರುವ ಚಿತ್ರದುರ್ಗವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

    ದೈಹಿಕ ಅಂತರ ಕಾಪಾಡಿಕೊಳ್ಳದಿದ್ದರೆ ಮದ್ಯದಂಗಡಿ ಮುಚ್ಚಲಾಗುವುದು. ಕುಂದು ಕೊರತೆ ಹೇಳಲು ಸರ್ಕಾರಿ ಕಚೇರಿಗಳಿಗೆ ಬರದೇ, ಮೇ17ರ ವರೆಗೆ ಡಿಸಿ ಕಚೇರಿಯ ವಾರ್‌ರೂಂಗೆ ಸಮಸ್ಯೆಗಳ ಮಾಹಿತಿ ಕೊಡುವಂತೆ ಮನವಿ ಮಾಡಿದರು.

    ಸಂಜೆ 7-ಬೆಳಗ್ಗೆ 7ರ ವರೆಗೆ ನಿಷೇಧಾಜ್ಞೆ ಇರುತ್ತದೆ. ಪರಸ್ಥಳಗಳಿಗೆ ಹೋಗಿ ಬಂದವರು ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಬೇಕು. 65 ವರ್ಷ ವಯಸ್ಸು ಮೀರಿದ ವೃದ್ಧರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮನೆಯಲ್ಲಿರಬೇಕು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts