More

    ನಾಳೆ ಶಿವರಾತ್ರಿ ಮಹೋತ್ಸವ ಆರಂಭ

    ಚಿತ್ರದುರ್ಗ: ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಫೆ.17ರಿಂದ 22ರ ವರೆಗೆ 90ನೇ ಮಹಾಶಿವರಾತ್ರಿ ಮಹೋತ್ಸವ ನಿತ್ಯ ಸಂಜೆ 6.30ಕ್ಕೆ ನಡೆಯಲಿದೆ ಎಂದು ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

    ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ 17ರ ಸಂಜೆ ಮಹೋತ್ಸವಕ್ಕೆ ಚಾಲನೆ ಸಿಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಶ್ರೀ ಜಗದ್ಗುರು ಸಿದ್ಧಾರೂಢ ಮಹಾತ್ಮರ ಪ್ರೇರಣೆಯಿಂದ ಹಿಂದಿನ ಶ್ರೀಗಳು 70 ವರ್ಷಗಳ ಕಾಲ ಸತತವಾಗಿ ಆಚರಿಸಿಕೊಂಡು ಬಂದಿರುವ ಶಿವಭಜನೆ, ಶಿವನಾಮ ಸಪ್ತಾಪವನ್ನು ಅನೂಚಾನವಾಗಿ ನಡೆದುಬಂದಿದೆ. ಮಹೋತ್ಸವ ಸಂದರ್ಭದಲ್ಲಿ ನೆರವೇರಿಸುತ್ತಿದ್ದ ಆರೂಢ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿ ವಿಳಂಬವಾಗಲಿದೆ. ಪ್ರಶಸ್ತಿ ಪ್ರದಾನಕ್ಕೆಂದೇ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿದರು.

    ಕಾರ್ಯಕ್ರಮ ವಿವರ-ಫೆ.17: ರಾಮದುರ್ಗ ಶ್ರೀ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವರ ಮಹಾರಾಜ್, ಹುಬ್ಬಳ್ಳಿ ಜಡಿಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಸ್ವಾಮೀಜಿ, ಸಚಿವರಾದ ಸಿ.ಟಿ.ರವಿ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರು, ಮಾಜಿ ಸಚಿವರು ಭಾಗಿ.

    18: ಹುಬ್ಬಳ್ಳಿ-ಬಿಜಾಪುರ ಶಾಂತಾಶ್ರಮ ಷಣ್ಮುಖಾರೂಢ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಂಗಳೂರು, ಕಬಳಿ, ಮೈಸೂರು ಹಾಗೂ ದಸರಿಘಟ್ಟ ಆದಿಚುಂಚನಗಿರಿ ಶಾಖಾ ಮಠಗಳ ಶ್ರೀಗಳು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಬಿ.ಮರಂಕಲ್ ಸಹಿತ ನಾನಾ ಪ್ರಮುಖರು ಇರುತ್ತಾರೆ.

    19: ಸಿರಿಗೆರೆ ಶ್ರೀ ತರಳಬಾಳು ಬ್ರಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದ ಸಮಾರಂಭದಲ್ಲಿ ಬಾಗಲಕೋಟೆ ಅರಿಕೆರೆ ಕೌದೀಶ್ವರ ಮಠದ ಶ್ರೀ ಮಾಧವಾನಂದ ಸ್ವಾಮೀಜಿ, ಸಂಸದ ಎ.ನಾರಾಯಣಸ್ವಾಮಿ, ಜಾದುಗಾರ ಕುದ್ರೋಳಿ ಗಣೇಶ್ ಭಾಗಿ.

    20: ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಾಮನಂದಪುರಿ ಸ್ವಾಮೀಜಿ ಸಾನ್ನಿಧ್ಯದ ಕಾರ್ಯಕ್ರಮದಲ್ಲಿ ತೀರ್ಥಕಟ್ನೂರು ನೇರ್ಲಗಿ ವಿರಕ್ತಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಚಿತ್ರದುರ್ಗ ಉದಯಗಿರಿ ಸದ್ಗುರು ಸೇವಾಶ್ರಮದ ಶ್ರೀ ಶ್ರೀಕಾಂತ ಗುರೂಜಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಸೇರಿ ನಾನಾ ಗಣ್ಯರು ಇರುತ್ತಾರೆ ಎಂದು ಶ್ರೀಗಳು ತಿಳಿಸಿದರು. ಉತ್ಸವ ಸಮಿತಿ ವಿ.ಎಲ್.ಪ್ರಶಾಂತ್ ಇತರರು ಉಪಸ್ಥಿತರಿದ್ದರು.

    21ರಂದು ಪಲ್ಲಕ್ಕಿ, ಜನಪದ ಉತ್ಸವ: 21ರ ಮಧ್ಯಾಹ್ನ 3ಕ್ಕೆ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಅವರ ಪಲಕ್ಕಿ ಹಾಗೂ ಜನಪದ ಉತ್ಸವ ಜರುಗಲಿದೆ. ಜೆಡಿಎಸ್ ಮುಖಂಡ ಕೆ.ಸಿ.ವಿರೇಂದ್ರ (ಪಪ್ಪಿ) ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೊರಟಗೆರೆ ಎಲೆರಾಂಪುರ ಕುಂಚಿಟಿಗ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ, ಕೂಸನೂರು ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಸ್ವಾಮೀಜಿ, ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಎಂ.ಚಂದ್ರಪ್ಪ, ಜಯಮ್ಮ ಬಾಲರಾಜ್ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

    22ರಂದು ಕೌದಿ ಪೂಜೆ ವಿಶೇಷ ಆಚರಣೆ: 22ರಂದು ಬ್ರಾಹ್ಮೀ ಮಹೂರ್ತದಲ್ಲಿ ಶಿವ ಮಹಿಮ್ನಾ ಸ್ತೋತ್ರ ವಿಭೂತಿ ಸ್ನಾನದೊಂದಿಗೆ ಸಪ್ತಾಹ ಸಮಾಪ್ತಿಯಾಗುತ್ತದೆ. ಬೆಳಗ್ಗೆ 10ಕ್ಕೆ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಕೌದಿ ಪೂಜೆ ನೆರವೇರಲಿದೆ. ಬೆಂಗಳೂರಿನ ಬಿ.ಜಿ.ಎಸ್.ಗ್ರೂಪ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶನಾಥ ಸ್ವಾಮಿಜಿ ಸಹಿತ ಹಲವು ಗಣ್ಯರು ಉಪಸ್ಥಿತರಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts