More

    ಕಟ್ಟಡ ಕಾರ್ಮಿಕರ ವಿವರ ಸಂಗ್ರಹಕ್ಕೆ ಇಲಾಖೆ ಸಜ್ಜು

    ಚಿತ್ರದುರ್ಗ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕಟ್ಟಡ ಕಾರ್ಮಿಕರಿಗೆ ರಾಜ್ಯಸರ್ಕಾರ ತಲಾ ಒಂದು ಸಾವಿರ ರೂ.ಗಳ ನೆರವು ಘೋಷಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ಜಮಾ ಆಗಲಿದೆ. ಆದರೆ ಅವರ ಬ್ಯಾಂಕ್ ಖಾತೆ, ಐಎಫ್‌ಎಸ್‌ಸಿ ಕೋಡ್ ಸಂಗ್ರಹಿಸುವುದು ಇಲಾಖೆಗೆ ಸವಾಲಾಗಿದೆ.

    ಕಟ್ಟಡ, ರಸ್ತೆ, ಸೇತುವೆ ಸೇರಿ ಅನೇಕ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಕಾರ್ಮಿಕರು ಮನೆಯಲ್ಲಿ ಇರುವಂತಾಗಿದೆ. ಗಾರೆ, ಕಾರ್ ಪೇಂಟರ್, ಪ್ಲಂಬರ್, ಎಲೆಕ್ಟ್ರೀಷಿಯನ್, ಮಾರ್ಬಲ್, ಗ್ರಾನೈಟ್, ಟೈಲ್ಸ್ ವರ್ಕರ್, ಬಾರ್ ಬೆಂಡಿಂಗ್, ರಸ್ತೆ, ಸೇತುವೆ ನಿರ್ಮಾಣ ಮೊದಲಾದ ಕಾರ್ಮಿಕರಿಗೆ ಸದ್ಯಕ್ಕೆ ಕೆಲಸ ಸಿಗುವ ಲಕ್ಷಣಗಳಿಲ್ಲ.

    ದೇಶದಲ್ಲಿ ಸಹಜ ಸ್ಥಿತಿ ನಿರ್ಮಾಣವಾದರೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳು ಪುನರಾರಂಭಕ್ಕೆ ಕನಿಷ್ಠ ಮೂರ‌್ನಾಲ್ಕು ತಿಂಗಳಾದರೂ ಬೇಕಾಗಲಿದೆ. ಅಲ್ಲಿಯವರೆಗೂ ಕಾರ್ಮಿಕರ ಜೀವನ ಅತ್ಯಂತ ಕಷ್ಟಕ್ಕೆ ಸಿಲುಕಲಿದೆ. ಆದ್ದರಿಂದ ಘೋಷಿತ ಧನಸಹಾಯ ಸಾಲದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಧನಸಹಾಯ ಜಮಾ ಮಾಡಲು ನೋಂದಾಯಿಸಿದವರೆಲ್ಲರೂ ಸಿಗಬೇಕಿದೆ. ಚಿತ್ರದುರ್ಗ ಜಿಲ್ಲೆಯ ಕಟ್ಟಡ ಕಾರ್ಮಿಕರು ವಲಸೆ ಹೋಗಿದ್ದರೆ, ಬೇರೆಡೆ ಕೆಲಸದಲ್ಲಿದ್ದಾಗ ನೋಂದಾಯಿಸಿ, ಚಿತ್ರದುರ್ಗ ಅಥವಾ ಮತ್ತೊಂದೆಡೆ ಇದ್ದರೆ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಒಟ್ಟಾರೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಶುಕ್ರವಾರದಿಂದ ಕಾರ್ಮಿಕರ ವಿವರ ಸಂಗ್ರಹವನ್ನು ಆರಂಭಿಸಿದ್ದಾರೆ.

    ಸಹಾಯವಾಣಿ ಸ್ಥಾಪನೆ: ತೊಂದರೆಯಲ್ಲಿ ಸಿಲುಕಿರುವ ಕಾರ್ಮಿಕರ ಅಹವಾಲು ಆಲಿಸಲು ಕಾರ್ಮಿಕ ಕಲ್ಯಾಣ ಮಂಡಳಿಯು ಸಹಾಯವಾಣಿ (ದೂ.ಸಂ.155214)ಯನ್ನು ಸ್ಥಾಪಿಸಿದೆ. ದಿನದ 24 ಗಂಟೆಯೂ ಇದು ಕಾರ್ಯ ನಿರ್ವಹಿಸಲಿದೆ ಎನ್ನುತ್ತಾರೆ ಅಧಿಕಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts