More

    ಓಬವ್ವ ನಾಡಿನಲ್ಲಿ ಹೆಣ್ಮಕ್ಕಳ ದರ್ಬಾರ್

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಒನಕೆ ಓಬವ್ವ ನಾಡಿನಲ್ಲಿ ಪ್ರಥಮ ಬಾರಿಗೆ ಆಡಳಿತ ಚುಕ್ಕಾಣಿ ಸಂಪೂರ್ಣ ಮಹಿಳೆಯರ ಕೈ ವಶವಾಗಿದೆ.

    ಜಿಲ್ಲಾ ಧಣಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಜಿಪಂ ಸಿಇಒ ಸೇರಿ ಅನೇಕ ಜಿಲ್ಲಾಮಟ್ಟದ ಹುದ್ದೆಗಳಲ್ಲಿ ನಾರಿಯರೇ ತುಂಬಿಕೊಂಡಿದ್ದಾರೆ.

    ಜೀಜಾ ಹರಿಸಂಗ್ ಬಳಿಕ ಬರೋಬ್ಬರಿ 37 ವರ್ಷಗಳ ನಂತರ ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗೆ ಕೆ.ರಾಧಿಕಾ ವರ್ಗಾವಣೆ ಆಗಿ ಬಂದಿದ್ದಾರೆ. ಈ ಮೂಲಕ ಜಿಲ್ಲೆಯ ಪ್ರಮುಖ ಹುದ್ದೆಗಳಾದ ಡಿಸಿ (ವಿನೋತ್ ಪ್ರಿಯಾ), ಸಿಇಒ (ಸತ್ಯಭಾಮಾ), ಎಸ್‌ಪಿ (ಜಿ.ರಾಧಿಕಾ) ಸ್ಥಾನದಲ್ಲಿ ಏಕಕಾಲಕ್ಕೆ ಮಹಿಳೆಯರು ದರ್ಬಾರ್ ನಡೆಸುತ್ತಿರುವುದು ಜಿಲ್ಲೆಯ ಮಟ್ಟಿಗೆ ವಿಶೇಷ ಮತ್ತು ಪ್ರಥಮ.

    ಇವರ ಜತೆಗೆ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ವೈಶಾಲಿ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ರೇಖಾ, ಕೃಷಿ ಇಲಾಖೆ ಉಪ ನಿರ್ದೇಶಕಿ ಭಾರತಮ್ಮ, ತೋಟಗಾರಿಕೆ ಇಲಾಖೆ ಡಿಡಿ ಸವಿತಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಂಜುಳಮ್ಮ, ಕಾರ್ಮಿಕ, ಸಾಮಾಜಿಕ ಅರಣ್ಯ, ಆರೋಗ್ಯ ಸೇರಿ ಅನೇಕ ಇಲಾಖೆಗಳ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಇದ್ದಾರೆ.

    ಜತೆಗೆ ಮಹಿಳಾ ಜನಪ್ರತಿನಿಧಿಳಾದ ಹಿರಿಯೂರು ಶಾಸಕಿ ಪೂರ್ಣಿಮಾ, ವಿಧಾನ ಪರಿಷತ್ ಸದಸ್ಯೆ ಜಯಮ್ಮ, ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್, ಉಪಾಧ್ಯಕ್ಷೆ ಸುಶೀಲಮ್ಮ ಸಹಿತ ನಾನಾ ಕ್ಷೇತ್ರದಲ್ಲಿ ಮಹಿಳೆಯರು ಈಗಾಗಲೇ ಮಿಂಚುತ್ತಿದ್ದಾರೆ.

    ಮಹಿಳಾ ಶಕ್ತಿಗೆ ಇನ್ನಷ್ಟು ಬಲ ಸಾಧ್ಯತೆ?: ಇಬ್ಬರು ಶಾಸಕಿಯರು, ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷರು, ವಿವಿಧ ತಾಪಂ ಅಧ್ಯಕ್ಷೆ ಸೇರಿ ಹಲವು ಮಹಿಳಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಡಳಿತ ನಡೆಸುವುದರಲ್ಲಿ ನಾವು ಯಾರಿಗೇನೂ ಕಮ್ಮಿ ಇಲ್ಲ ಎನ್ನುತ್ತಿದ್ದಾರೆ. ಇನ್ನು ರಾಜ್ಯ ಸಂಪುಟ ವಿಸ್ತರಣೆ ವೇಳೆ ಅದೃಷ್ಟ ಖುಲಾಯಿಸಿ ಶಾಸಕಿ ಕೆ.ಪೂರ್ಣಿಮಾ ಮಂತ್ರಿಯಾದರೆ ಜಿಲ್ಲ್ಲಾ ಮಹಿಳಾ ಶಕ್ತಿಗೆ ಮತ್ತಷ್ಟು ಬಲ ಬರಲಿದೆ.

    ಬೆಸ್ಟ್ ಟೈಮ್: ಹೆಣ್ಣು ಮಕ್ಕಳ ಆಡಳಿತದಲ್ಲಿ ಜಿಲ್ಲೆ ಎಷ್ಟು ಸುಭದ್ರವಾಗಿರಲಿದೆ ಎಂಬುದನ್ನು ಮುಂದಿನ ದಿನಗಳಲ್ಲೇ ನೀವೇ ನೋಡಲಿದ್ದೀರಿ. ಜಿಲ್ಲೆಗೆ ಇದು ಬೆಸ್ಟ್‌ಟೈಮ್ ಎಂದು ಜನರು ಹೇಳುವಂತಾಗಲಿದೆ ಎಂದು ಎಸ್‌ಪಿ ಜಿ.ರಾಧಿಕಾ ತಿಳಿಸುತ್ತಾರೆ.

    37 ವರ್ಷಗಳ ನಂತರ ಮಹಿಳಾ ಎಸ್ಪಿ: 1982-83ರಲ್ಲಿ ಎಸ್ಪಿಯಾಗಿದ್ದ ಜೀಜಾ ಹರಿಸಂಗ್ ವರ್ಗಾವಣೆ ಆದ ಸುದೀರ್ಘ 37 ವರ್ಷಗಳ ನಂತರ ಮತ್ತೊಬ್ಬ ಮಹಿಳೆ ಜಿಲ್ಲಾ ರಕ್ಷಣಾಧಿಕಾರಿಯಾಗಿ ಚಿತ್ರದುರ್ಗ ಜಿಲ್ಲೆಗೆ ನೇಮಕವಾಗಿದ್ದಾರೆ. ಜೀಜಾ ಹರಿಸಿಂಗ್ ಅವಧಿ ( 1982-83)

    ರಾಧಿಕಾ ಮೂಲ ಬೆಂಗಳೂರು: ಬೆಂಗಳೂರೂ ಮೂಲದ ಜಿ.ರಾಧಿಕಾ ಇಂಜಿನಿಯರಿಂಗ್ ಪದವೀಧರೆ (ಕಂಪ್ಯೂಟರ್ ಸೈನ್ಸ್). 2012ರ ಬ್ಯಾಚ್ ಐಪಿಎಸ್ ಅಧಿಕಾರಿ. ಬೆಳಗಾವಿಯಲ್ಲಿ ಡಿಸಿಪಿ (ಎಲ್‌ಆ್ಯಂಡ್‌ಒ), ಮಂಡ್ಯ ಎಸ್ಪಿ ಹಾಗೂ ಡಿಜಿ ಮತ್ತು ಐಜಿಪಿ ಕಚೇರಿಯಲ್ಲಿ ಎಐಜಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts