More

    ಡೆಸ್ಟಿನಿ-2020 ಸಂಭ್ರಮಕ್ಕೆ ಚಾಲನೆ

    ಚಿತ್ರದುರ್ಗ: ನಗರದ ದೇವರಾಜ ಅರಸು ಎಜುಕೇಶಷನ್ ಸೊಸೈಟಿ 35ನೇ ವಾರ್ಷಿಕೋತ್ಸವ ‘ಡೆಸ್ಟಿನಿ-2020’ ಮೂರು ದಿನಗಳ ವರ್ಣರಂಜಿತ ಸಾಂಸ್ಕೃತಿಕ ಹಾಗೂ ಸನ್ಮಾನ ಸಮಾರಂಭಕ್ಕೆ ಶುಕ್ರವಾರ ಸಂಜೆ ಸಂಸ್ಥೆ ಆವರಣದಲ್ಲಿ ಚಾಲನೆ ದೊರೆಯಿತು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಎಂ.ಚಂದ್ರಪ್ಪ ಮಾತನಾಡಿ, ಸಾಮಾಜಿಕ ಜೀವನದಲ್ಲಿ ಸಾರ್ವಜನಿಕರು ತಮಗೆ ನೀಡಿರುವ ಸ್ಥಾನಮಾನದ ಋಣ ತೀರಿಸುವ ಹೊಣೆ ನನ್ನ ಮೇಲಿದೆ. ಲಾಭದ ಆಸೆ ಇದ್ದಿದ್ದರೇ ಬೆಂಗಳೂರು ಅಥವಾ ಮೈಸೂರಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುತ್ತಿದ್ದೆ ಎಂದರು.

    ಏಕಕಾಲಕ್ಕೆ 12 ಸಾವಿರ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಏಳಂತಸ್ತಿನ 317 ಕೊಠಡಿಗಳಿರುವ ಈ ಕಟ್ಟಡ ಹೊಂದಿದೆ. ಶೀಘ್ರದಲ್ಲಿ ಇಂದು ಒಂದು ಅಂತಸ್ತನ್ನು ಎತ್ತರಿಸುವುದಾಗಿ ಹೇಳಿದರು.

    ಸಮಾರಂಭ ಉದ್ಘಾಟಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಮಾತನಾಡಿ, ನಾನು ಈ ಸಂಸ್ಥೆಯ ಬಿಇಡಿ ವಿದ್ಯಾರ್ಥಿಯಾಗಿದ್ದೆ ಎಂದು ನೆನಪಿಸಿದರು.

    ಯಾವುದೇ ಜಿಲ್ಲೆ ಮೊದಲು ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ಉಳಿದೆಲ್ಲ ಕ್ಷೇತ್ರಗಳಲ್ಲೂ ಆ ಜಿಲ್ಲೆ ಉನ್ನತಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.

    ನಟಿ ರಾಗಿಣಿ ದ್ವಿವೇದಿ ಶಿಕ್ಷಣದ ಮಹತ್ವವನ್ನು ಸಾರಿದರು. ನಿವೃತ್ತ ಪ್ರಾಚಾರ‌್ಯೆ ಪದ್ಮಾವತಿ ಪಾಲಯ್ಯ ಮತ್ತಿತರರು ಮಾತನಾಡಿದರು.
    ಎನ್.ರವಿಕುಮಾರ್ ಸಹಿತ ಸಂಸ್ಥೆ ಹಳೇ, ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಂಸ್ಥೆಯ ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು.

    ಡಿವೈಎಸ್ಪಿ ಪಾಂಡುರಂಗ, ಸಂಸ್ಥೆ ಆಡಳಿತಾಧಿಕಾರಿ ಚಂದ್ರಕಲಾ, ಚಿತ್ರ ನಿರ್ಮಾಪಕ ರೆಹಮಾನ್, ಪ್ರಾಚಾರ‌್ಯ ರುದ್ರಮುನಿ, ಯಶ್ವಿನಿ ಕಿರಣ್ ಮೊದಲಾದ ಗಣ್ಯರು ಇದ್ದರು.

    ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮತ್ತವರ ತಂಡದ ಸದಸ್ಯರು ಹಾಸ್ಯೋತ್ಸವ ನಡೆಸಿಕೊಟ್ಟರು. ಸಂಸ್ಥೆ ಸಿಇಒ ಎಂ.ಸಿ.ರಘುಚಂದನ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts