More

    ಸ್ವಚ್ಛತಾ ಸೇವಾ ಅಭಿಯಾನದಲ್ಲಿ ಕರ್ನಾಟಕ ಪ್ರಥಮ

    ಚಿತ್ರದುರ್ಗ: ದೇಶಾದ್ಯಂತ ಸೆಪ್ಟೆಂಬರ್ 15ರಿಂದ ಅ.2ರವರೆಗೆ ಜರುಗಿದ ಸ್ವಚ್ಛತಾ ಸೇವಾ ಅಭಿಯಾನದಲ್ಲಿ,ಕರ್ನಾಟಕ ಪ್ರಥಮ ಸ್ಥಾನಗಳಿಸಿದ್ದು, ಸು ಜಲಾಂ 2.0 ಉತ್ತಮ ಅನುಷ್ಠಾನಕ್ಕಾಗಿ ಚಿತ್ರದುರ್ಗ ಜಿ.ಪಂ.ಕೇಂದ್ರದ ಪ್ರಶಂಸೆಗೆ ಪಾತ್ರವಾಗಿದೆ. ಗ್ರಾಮೀಣ ಭಾಗದ ಜನರಲ್ಲಿ 15 ದಿನ ಗಳ ಕಾಲ ನೈರ್ಮಲ್ಯ ಹಾಗೂ ಸ್ವಚ್ಛತೆ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆಯಿಂದ ನೈರ್ಮಲ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

    ರಾಜ್ಯಗಳು ಕೈಗೊಂಡ ಚಟುವಟಿಕೆಗಳ ಕುರಿತಂತೆ ಪ್ರತಿದಿನ ಪಡೆದ ವರದಿಗಳ ಮೌಲ್ಯಮಾಪನವನ್ನು ಆಧರಿಸಿ ಕೇಂದ್ರ ಕರ್ನಾಟಕಕ್ಕೆ ಪ್ರಥಮ ಸ್ಥಾನ ಘೋಷಿಸಿದೆ. ಅ.2ರಂದು ಹೊಸದಿಲ್ಲಿ ಜರುಗಿದ ಕಾರ‌್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ರಾಜ್ಯದ ಅಪರ ಕಾರ‌್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

    ಸ್ವಚ್ಛ ಭಾರತ್‌ಮಿಷನ್(ಗ್ರಾ)ಯೋಜನೆಯಡಿ ಘನ,ದ್ರವ ತ್ಯಾಜ್ಯ ನಿರ್ವಹಣೆ,ಶೌಚಗೃಗಳ ಬಳಕೆ ಕುರಿತು ಜಾಗೃತಿ,ಸುಜಲಾಂ 2.0 ಅಡಿ ಇಂಗು ಗುಂಡಿಗಳ ನಿರ್ಮಾಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಚಿತ್ರದುರ್ಗ ಜಿ.ಪಂ.ಕ್ಕೆ ಕೇಂದ್ರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾಗೂ ಜಲಶಕ್ತಿ ಮಂತ್ರಾಲಯ ಪ್ರಶಂಸೆ ವ್ಯಕ್ತಪಡಿಸಿದೆ.

    ಈ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ 30 ಜಿಲ್ಲೆಗಳ ಪೈಕಿ ಚಿತ್ರದುರ್ಗ,ಕೊಡಗು,ಹಾವೇರಿ ಹಾಗೂ ಕೊಪ್ಪಳ ಜಿಲ್ಲಾ ಪಂಚಾಯತಿಗಳು ಪ್ರಶಂಸೆಗೆ ಪಾತ್ರವಾಗಿವೆ. ಚಿತ್ರದುರ್ಗ ಜಿ.ಪಂ.ಪರವಾಗಿ ಮುಖ್ಯಯೋಜನಾ ನಿರ್ದೇಶಕ ಕೆ.ಎಸ್.ಮಹಾಂತೇಶಪ್ಪ ಪ್ರಶಂಸನಾ ಪತ್ರವನ್ನು ಸ್ವೀಕರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts