More

    ಕಳಪೆ ಗುಣಮಟ್ಟದ ರಾಗಿ ಖರೀದಿ

    ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ರಾಗಿಯಲ್ಲಿ ಕಲ್ಲು, ಮಣ್ಣು ಇರುತ್ತದೆದೆಂಬ ಶಾಸಕ ಗೂಳಿಹಟ್ಟಿ ಡಿ.ಶೇಖರ್ ದೂರನ್ನು ಪರಿಶೀಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

    ಗುರುವಾರ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಈ ವಿಷಯ ಪ್ರಸ್ತಾಪಿಸಿ, ಹೊಸದುರ್ಗದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ಎಫ್‌ಎಕ್ಯೂ ಗುಣಮಟ್ಟ ಉಲ್ಲಂಘಿಸಿ ರಾಗಿ ಖರೀದಿಸಲಾಗಿದೆ.

    ರಾಗಿಯಲ್ಲಿ ಕಲ್ಲು, ಮಣ್ಣು ಹೆಚ್ಚಿದೆ, ರೈತರಿಂದ ನೇರ ಖರೀದಿಸದೆ ದಲ್ಲಾಳಿ ಮೂಲಕ ಖರೀದಿಸಲಾಗುತ್ತಿದೆ ಎಂಬ ಅಸಮಾಧಾನಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗುಣಮಟ್ಟದ ರಾಗಿಯನ್ನು ರೈತರಿಮದ ನೇರ ಖರೀದಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

    3150 ರೂ. ಬೆಲೆ: ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಕೃಷಿ ಇಲಾಖೆ ಫ್ರೂಟ್ಸ್ ತಂತ್ರಾಂಶದ ಆಧರಿಸಿ ರೈತರಿಂದ ಕ್ವಿಂ.ಗೆ 3150 ರೂ. ಬೆಂಬಲ ಬೆಲೆಯಂತೆ ರಾಗಿ ಖರೀದಿಸುತ್ತಿದೆ. ಚಿತ್ರದುರ್ಗ, ಹೊಳಲ್ಕೆರೆ (ಚಿಕ್ಕಜಾಜೂರು) ಹಾಗೂ ಹೊಸದುರ್ಗ ತಾಲೂಕಿನ ರಾಗಿ ಖರೀದಿ ಕೇಂದ್ರಗಳಲ್ಲಿ ಈವರೆಗೆ 26504 ಕ್ವಿ.ರಾಗಿ ಖರೀದಿಸಲಾಗಿದೆ. ಚಿತ್ರದುರ್ಗ-1336 ಕ್ವಿ, ಹೊಳಲ್ಕೆರೆ (ಚಿಕ್ಕಜಾಜೂರು)-2008, ಹೊಸದುರ್ಗ-23160 ಕ್ವಿಂಟಲ್ ರಾಗಿ ಖರೀದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts