ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಅತೀವ ನೋವಿನಲ್ಲಿದ್ದ ಮೇಘನಾ ರಾಜ್ಗೆ ಜೂನಿಯರ್ ಚಿರು ಆಗಮನದಿಂದ ಸಂತಸ ಮರಳಿ ಬಂದಿದೆ. ಸರ್ಜಾ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ. ಮರೆಯಾದ ಚಿರು ಮತ್ತು ಮಗುವಿನ ರೂಪದಲ್ಲಿ ಮರಳಿ ಬಂದಿದ್ದಾನೆ ಎಂಬ ಸಂತೋಷ ಎಲ್ಲರಲ್ಲೂ ಇದೆ.
ಇನ್ನು ಅಭಿಮಾನಿಗಳ ನಿರೀಕ್ಷೆಯಂತೆಯೇ ಜೂನಿಯರ್ ಚಿರು ಆಗಮಿಸಿದ್ದು, ಜಾಲತಾಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಹೀಗಾಗಿಯೇ ಟ್ವಿಟರ್ನಲ್ಲಿ ಚಿರಂಜೀವಿ ಸರ್ಜಾ ಹೆಸರು ಮತ್ತೆ ಟ್ರೆಂಡಿಂಗ್ನಲ್ಲಿದೆ. ಗಂಡು ಮಗು ಜನಿಸುತ್ತಿದ್ದಂತೆಯೇ ಮಗುವಿನ ಫೋಟೋ ಹಾಗೂ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಚಿರು ನೆನಪಿನ ಜತೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಚಿರು-ಮೇಘನಾ ನಿಶ್ಚಿತಾರ್ಥದ ದಿನದಂದೇ ಜೂನಿಯರ್ ಚಿರು ಆಗಮಿಸಿರುವುದು ವಿಶೇಷ.
https://www.facebook.com/VVani4U/videos/470117683948442
https://www.instagram.com/p/CGo4eKJglv5/
https://www.instagram.com/p/CGo23_ngtaz/