More

    ‘”ಹ್ಯಾಪಿ ಬರ್ತ್‌ಡೇ ಚಿರು, ವಿ ಲವ್‌ ಯು” ಚಿರಂಜೀವಿ ಸರ್ಜಾ ಹುಟ್ಟು ಹಬ್ಬಕ್ಕೆ ವಿಶೇಷ ಪೋಸ್ಟ್​​ ಹಂಚಿಕೊಂಡ ಮೇಘನಾ ಸರ್ಜಾ

    ಇಂದು ಸ್ಯಾಂಡಲ್‌ವುಡ್‌ ನಟ ದಿವಂಗತ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬ. ಸೋಷಿಯಲ್‌ ಮೀಡಿಯಾದಲ್ಲಿ ಹ್ಯಾಪಿ ಬರ್ತ್‌ಡೇ ಚಿರು, ಮಿಸ್‌ ಯು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಮೇಘನಾ ರಾಜ್‌ ಅವರು ಚಿರು ನೆನಪಿನಲ್ಲಿ “ಹ್ಯಾಪಿ ಬರ್ತ್‌ಡೇ ಚಿರು, ವಿ ಲವ್‌ ಯು” ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.


    10 ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ರಾಜ್‌ ಅವರನ್ನು ಚಿರಂಜೀವಿ ಸರ್ಜಾ ಮನೆಯವರನ್ನು ಒಪ್ಪಿಸಿ 2 ಮೇ 2018 ರಂದು ವಿವಾಹಾಗಿದ್ದು, ಮದುವೆಯಾದ ಎರಡೇ ವರ್ಷದಲ್ಲಿ 7 ಜೂನ್‌ 2020 ಮಧ್ಯಾಹ್ನ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು.


    ರಾಜಮಾರ್ತಾಂಡ ಸಿನಿಮಾದ ಶೂಟಿಂಗ್‌ ಮುಗಿದ ಬಳಿಕ ಚಿರು ಅವರ ಅಕಾಲಿಕ ಸಾವು ಘಟಿಸಿತ್ತು. ನಂತರದಲ್ಲಿ ರಾಜಮಾರ್ತಾಂಡ ಚಿತ್ರದ ಸಂಪೂರ್ಣ ಜವಾಬ್ದಾರಿಯನ್ನು ಅವರ ಸಹೋದರ, ನಟ ಧ್ರುವ ಸರ್ಜಾ ವಹಿಸಿಕೊಂಡಿದ್ದರು.


    ಕಳೆದ ವಾರ ರಾಜಾ ಮಾರ್ತಾಂಡ ಬಿಡುಗಡೆಯಾಗಿದೆ. ಈ ಚಿತ್ರ ಈಗಲೂ ಹಲವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿರು ಅಭಿಮಾನಿಗಳು ಅಗಲಿದ ತಮ್ಮ ನೆಚ್ಚಿನ ನಟನನ್ನು ತೆರೆಯ ಮೂಲಕ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.


    ಪತಿಯ ನೆನಪಿನಲ್ಲಿ ಮೇಘನಾ ರಾಜ್‌ ಹ್ಯಾಪಿ ಬರ್ತ್‌ಡೇ ಚಿರು, ವಿ ಮಿಸ್‌ ಯು ಎಂದು ಇನ್ಸ್​​​ಟಾಗ್ರಾಂನಲ್ಲಿ ಬರೆದಿದ್ದಾರೆ.
    ಪತಿ ಚಿರಂಜೀವಿ ಸರ್ಜಾ ಅಗಲಿಕೆ ನೋವನ್ನು ಮೇಘನಾ ರಾಜ್​ ತಮ್ಮ ಮಗ ರಾಯನ್​ ನಗುವಿನಲ್ಲಿ ಮರೆಯುತ್ತಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಹುಟ್ಟುಹಬ್ಬವೂ ಇತ್ತು. ಇದೀಗ ಚಿರು ಮಗುವಿನ ಹುಟ್ಟುಹಬ್ಬವೂ ಅಕ್ಟೋಬರ್‌ 22ರಲ್ಲಿ ನಡೆಯಲಿದೆ. ಈ ಮೂವರ ಹುಟ್ಟುಹಬ್ಬ ಅಕ್ಟೋಬರ್‌ನಲ್ಲೇ ಬಂದಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts