More

    ಗುಳ್ಳೆನರಿ ಬುದ್ಧಿ ಬಿಡದ ಡ್ರ್ಯಾಗನ್

    ನವದೆಹಲಿ: ವಾಸ್ತವ ಗಡಿ ರೇಖೆ (ಎಲ್‌ಎಸಿ) ಯ ಪೂರ್ವ ವಲಯದಲ್ಲಿ ಚೀನೀ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರು ಈ ವಾರದ ಆರಂಭದಲ್ಲಿ ಕಬ್ಬಿಣದ ಸರಳುಗಳನ್ನು ಹೊತ್ತುಕೊಂಡು ಹೋಗಿರುವುದಾಗಿ ವರದಿಯೊಂದು ತಿಳಿಸಿದೆ.
    ಪಿಎಲ್‌ಎ ಪಡೆಗಳು ಆಗಾಗ ನಿಯಮಗಳನ್ನು ಧಿಕ್ಕರಿಸುತ್ತವೆ ಮತ್ತು ಅವು ಗಾಯಗೊಂಡರೆ ಹಿಂದೆ ಅಡಗಿಕೊಳ್ಳುತ್ತವೆ ಎಂಬ ಭಾರತೀಯ ರಕ್ಷಣಾ ಸಂಸ್ಥೆಯ ನಂಬಿಕೆಯನ್ನು ಇದು ಪುನರುಚ್ಚರಿಸುತ್ತದೆ.

    ಇದನ್ನೂ ಓದಿ: ಡ್ರ್ಯಾಗನ್ ಕಳ್ಳಾಟ, ಗಡಿಯಲ್ಲಿ ಕಣ್ಣಾಮುಚ್ಚಾಲೆ

    ಅರುಣಾಚಲ ಪ್ರದೇಶದ ಕಾಮೆಂಗ್ ಸೆಕ್ಟರ್‌ನಲ್ಲಿ ವಾಸ್ತವ ಗಡಿ ರೇಖೆ ಗುಂಟ ಭಾರತೀಯ ಯೋಧರೊಂದಿಗೆ ಈ ವಾರದ ಆರಂಭದಲ್ಲಿ ಸಂಘರ್ಷಕ್ಕಿಳಿದಾಗ ಚೀನಾದ ಸೈನಿಕರ ಬ್ಯಾಕ್ ಪ್ಯಾಕ್​ಗಳಲ್ಲಿ ಕಬ್ಬಿಣದ ಸರಳುಗಳು ಪತ್ತೆಯಾಗಿದ್ದವು ಎಂದು ಸುದ್ದಿ ಸಂಸ್ಥೆಯೊಂದು ಮೂಲಗಳನ್ನು ಉಲ್ಲೇಖಿಸಿದೆ.
    “ಪಿಎಲ್‌ಎ ಸೈನಿಕರು ಚಕಮಕಿ ನಡೆಸಲು ಸಿದ್ಧರಾಗಿ ಬರುತ್ತಾರೆ ಮತ್ತು ವಾಡಿಕೆಯಂತೆ ಸಂಘರ್ಷದ ಸಮಯದಲ್ಲಿ ನಿಯಮಾವಳಿಗಳನ್ನು ಮುರಿಯುತ್ತಾರೆ. ಆದರೆ ನಂತರದ ಹಗರಣಗಳಲ್ಲಿ ಅವರಿಗೆ ತೊಂದರೆಯಾದಾಗ, ಅವರು ‘ಭಾರತೀಯ ಸೈನಿಕರು ನಿಯಮಾವಳಿಗಳನ್ನು ಮುರಿಯುತ್ತಾರೆ’ ಎಂದು ತಪ್ಪಾಗಿ ಆರೋಪಿಸುತ್ತಾರೆ, ಎಂದು ಅದು ಮೂಲವೊಂದನ್ನು ಉಲ್ಲೇಖಿಸಿದೆ.

    ಇದನ್ನೂ ಓದಿ: ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…

    ಮೇ 5-6 ರಂದು ಪಾಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ನಡೆದ ಸಂಘರ್ಷದಲ್ಲಿ ಪಿಎಲ್‌ಎ ಸೈನಿಕರು ಇದೇ ರೀತಿ ಕಬ್ಬಿಣದ ಸರಳುಗಳು ಮತ್ತು ಕಲ್ಲುಗಳಿಂದ ಶಸ್ತ್ರಸಜ್ಜಿತರಾಗಿದ್ದರು. ನಿಯಮಾವಳಿಗಳನ್ನು ಅನುಸರಿಸುವ ಬಗ್ಗೆ ಪಿಎಲ್‌ಎ ನಿಜಕ್ಕೂ ಶಿಸ್ತುಬದ್ಧವಾಗಿದ್ದರೆ, ಅದು ಜವಾಬ್ದಾರಿಯನ್ನು ಗುರುತಿಸಬೇಕು ಮತ್ತು ಅಂತಹ ಆಕ್ಷೇಪಾರ್ಹ ತಂತ್ರಗಳನ್ನು ಅನುಮತಿಸುವ ಅದರ ಕಮಾಂಡರ್‌ಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅದರಲ್ಲಿ ತಿಳಿಸಲಾಗಿದೆ. ಜೂನ್ 15 ರಂದು, ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ವಾಸ್ತವ ಗಡಿ ರೇಖೆಯ (ಎಲ್‌ಎಸಿ) ಗುಂಟ ಭಾರತ ಮತ್ತು ಚೀನಾದ ಸೈನಿಕರ ನಡುವೆ ಚಕಮಕಿ ನಡೆದಿತ್ತು. ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಇಪ್ಪತ್ತು ಭಾರತೀಯ ಸೈನಿಕರು ಹುತಾತ್ಮರಾದರು.

    ಇದನ್ನೂ ಓದಿ: ಉಗ್ರ ದಾಳಿಗೆ ಬಲಿಯಾದ ಸಿಆರ್​ಪಿಎಫ್​ ಯೋಧ ಹಾಗೂ ಮಗು

    ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಭಾರತೀಯ ಪಡೆಗಳು ತಾವು ಹೊತ್ತೊಯ್ಯುವ ಬಂದೂಕುಗಳನ್ನು ಬಳಸದೆ ಇದ್ದರೂ, ಚೀನಾ ಪಡೆಗಳು ತಮ್ಮ ವಿರೋಧಿ ದೇಶದ ಸೈನಿಕರ ಮೇಲೆ ಕಬ್ಬಿಣದ ಸರಳುಗಳು, ಕಲ್ಲುಗಳು, ಮುಳ್ಳುತಂತಿ ಸುತ್ತಿದ ಲಾಠಿಗಳಿಂದ ದಾಳಿ ಮಾಡಿವೆ ಎಂದು ವರದಿಗಳು ಸೂಚಿಸಿವೆ.
    ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರ ಹತ್ಯೆಯನ್ನು ಚೀನಾದ “ಪೂರ್ವನಿರ್ಧರಿತ ಮತ್ತು ಯೋಜಿತ ಕ್ರಮ” ಎಂದು ಭಾರತ ಹೇಳಿತು. ವಾಸ್ತವವಾಗಿ, ಈ ಕಾರ್ಯಾಚರಣೆಗೆ ಅನುಮತಿಸಿದ ವೆಸ್ಟರ್ನ್ ಥಿಯೇಟರ್ ಕಮಾಂಡ್​​​ನ ಮುಖ್ಯಸ್ಥ ಜನರಲ್ ಝಾವೋ ಜಾಂಗ್​​ಕ್ವಿ ಅವರ ಹೊಣೆ ಇದಾಗಿದೆ ಎಂದು ಅಮೆರಿಕ ಬೇಹುಗಾರಿಕೆ ಪಡೆ ಹೇಳಿದೆ.

    ಚಂದ್ರಯಾನ 2024: ಬಾಹ್ಯಾಕಾಶ ನೌಕೆಯಲ್ಲಿ ಶೌಚಾಲಯ ವಿನ್ಯಾಸ ಸ್ಪರ್ಧೆಗೆ ನಾಸಾ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts