More

    ಕರೊನಾಗೆ ಸೆಡ್ಡುಹೊಡೆದು ಸತತ ಹೋರಾಡಿದ್ದ ಚೀನಾ ವೈದ್ಯ ಸಾವು: ಇನ್ನೊಂದು ವಾರದಲ್ಲಿ ಬರ್ತ್​ಡೇ ಇತ್ತು, ತಂದೆಯೂ ಸಾವು

    ವುಹಾನ್​: ಕರೊನಾ ವೈರಸ್​ ವಿರುದ್ಧ 35 ದಿನಗಳಿಂದ ನಿರಂತರವಾಗಿ ಹೋರಾಡುತ್ತಿದ್ದ ಚೀನಾ ವೈದ್ಯರೊಬ್ಬರು ಪಾರ್ಶ್ವವಾಯುಗೆ ತುತ್ತಾಗಿ ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ.

    ಡಾ. ಡಾಂಗ್​ ತಿಯಾನ್(29) ಮೃತ ವೈದ್ಯ. ಅರಿವಳಿಕೆ ತಜ್ಞರಾಗಿದ್ದ ತಿಯಾನ್​ ಹುಬೇನಲ್ಲಿರುವ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇನ್ನೊಂದು ವಾರದಲ್ಲಿ ತಿಯಾನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಿತ್ತು. ಆದರೆ, ಕರೊನಾ ಮಹಾಮಾರಿ ಪರೋಕ್ಷವಾಗಿ ಅವರನ್ನು ತನ್ನ ಮೃತ್ಯುಕೂಪಕ್ಕೆ ಬಲಿ ಪಡೆದುಕೊಂಡಿದೆ.

    ಕಳೆದ ಒಂದು ತಿಂಗಳಿಂದ ವೈರಸ್​ ವಿರುದ್ಧ ಹೋರಾಡುತ್ತಿರುವ ವೈದ್ಯರಲ್ಲಿ ತಿಯಾನ್​ ಕೂಡ ಪ್ರಮುಖರಾಗಿದ್ದರು. ಮಾರ್ಚ್​ 3ರಂದು ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಐಸಿಯುನಲ್ಲಿ 19 ದಿನಗಳ ಕಾಲ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಒಂದು ವಾರದ ಹಿಂದಷ್ಟೇ ತಿಯಾನ್​ ಅವರು ಅನಾರೋಗ್ಯದಿಂದಾಗಿ ತಂದೆಯನ್ನು ಕಳೆದುಕೊಂಡಿದ್ದರು.

    ಹುಬೇ ಪ್ರಾಂತ್ಯದ ದಂಗ್​ಯಂಗ್​ ಪ್ರದೇಶದಲ್ಲಿ ತಿಯಾನ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ಅನೇಕ ಮಂದಿ ವೈದ್ಯನ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಿದರು. “ಆ್ಯಂಟಿ ಕರೊನಾ ವೈರಸ್​ ಹೀರೋ ಡಾಂಗ್​ ತಿಯಾನ್​ ತವರಿಗೆ ಮತ್ತೆ ಮರಳಲಿ” ಎಂಬ ಬ್ಯಾನರ್​ಗಳನ್ನು ಹಿಡಿದು ಗೌರವ ಸೂಚಿಸಿದರು.

    ಅನಾರೋಗ್ಯದಿಂದ ನರಳುತ್ತಿದ್ದ ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದ ತಿಯಾನ್​, ಜನವರಿ ಅಂತ್ಯದಲ್ಲಿ ಸ್ವಯಂಪ್ರೇರಿತರಾಗಿ ವೈರಸ್​ ವಿರುದ್ಧ ಹೋರಾಡಲು ಕೆಲಸಕ್ಕೆ ಮರಳಿದ್ದರು. ಅಂದಹಾಗೆ ಹುಬೇ ಕರೊನಾ ವೈರಸ್​ ಸ್ಪೋಟಗೊಂಡ ಕೇಂದ್ರ ಭಾಗವಾಗಿದೆ.

    ಸತತ 35 ದಿನಗಳಿಂದ ಒಮ್ಮೆ ವಿರಾಮವಿಲ್ಲದೇ ವೈರಸ್​ ವಿರುದ್ಧ ಹೋರಾಡಿದ್ದ ತಿಯಾನ್​ಗೆ ಫೆ. 29ರಂದು ಕೆಲಸಕ್ಕೆ ವಿರಾಮ ನೀಡಲಾಗಿತ್ತು. ಕ್ವಾರಂಟೈನ್​ ಅವಶ್ಯಕತೆಯಿಂದ ಅವರು ಪ್ರತ್ಯೇಕವಾಗಿದ್ದರು. ಕ್ವಾರಂಟೈನ್​ನಲ್ಲಿದ್ದ ಸಂದರ್ಭದಲ್ಲಿ ಇದ್ದಕ್ಕಿಂತ ತಲೆನೋವು ಕಾಣಿಸಿಕೊಂಡು, ಮಾತನಾಡುವ ಸಾಮರ್ಥ್ಯವನ್ನು ಕ್ಷೀಣಿಸಲು ಆರಂಭಿಸಿದಾಗ ಆಸ್ಪತ್ರೆಗೆ ದಾಖಲಾಗಿದ್ದರು.

    ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್​ 21ರಂದು ತಿಯಾನ್​ ಮೃತಪಟ್ಟರು ಎಂದು ಹುಬೇ ಪ್ರಾಂತ್ಯದ ಜಿಜಿಯಾಂಗ್​ ಪೀಪಲ್ಸ್​ ಹಾಸ್ಪಿಟಲ್​ ಘೋಷಿಸಿದೆ. ಇದೇ ಆಸ್ಪತ್ರೆಯಲ್ಲಿ ತಿಯಾನ್​ ಕೆಲಸ ಮಾಡುತ್ತಿದ್ದರು.

    ತಿಯಾನ್​ ಅವರು ಕೆಲಸದಲ್ಲಿ ತುಂಬಾ ಶ್ರದ್ಧೆಯನ್ನು ಹೊಂದಿದ್ದರು ಎಂದು ಆಸ್ಪತ್ರೆ ತಿಳಿಸಿದೆ. ಅವರ ಸಹದ್ಯೋಗಿಗಳು ಕೂಡ ತಿಯಾನ್​ ಕಾರ್ಯವನ್ನು ಸ್ಮರಿಸಿ, ಅಗಲಿಕೆಯನ್ನು ನೆನೆದು ಕಣ್ಣೀರಿಟ್ಟರು. ಮಿಲಿಯನ್​ ವೈದ್ಯರಲ್ಲಿ ತಿಯಾನ್ ಅತ್ಯುತ್ತಮ ಪ್ರತಿನಿಧಿ ಎಂದು ಹಾಸ್ಪಿಟಲ್​ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿದೆ. (ಏಜೆನ್ಸೀಸ್​)

    ಸ್ಟಾರ್​ ಎಂಬುದನ್ನು ಮರೆತು ರೋಗಿಯ ರೀತಿ ವರ್ತಿಸುವುದನ್ನು ಮೊದಲು ಕಲಿಯಬೇಕಿದೆ: ಸಿಂಗರ್​ ಕನ್ನಿಕಾಗೆ ವೈದ್ಯರ ಎಚ್ಚರಿಕೆ

    ತಿಹಾರ್​ ಜೈಲಿನ 3000ಕ್ಕೂ ಹೆಚ್ಚು ಕ್ರಿಮಿನಲ್​ಗಳಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದ ಕರೊನಾ ವೈರಸ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts