More

    ಪದವೀಧರರು ಹೆಸರು ನೋಂದಾಯಿಸಿಕೊಳ್ಳಿ

    ಚಿಂಚೋಳಿ: ಪದವೀಧರರ ಕ್ಷೇತ್ರದ ಚುನಾವಣೆಗೆ ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ಪ್ರಚಾರ ನೀಡುವ ಮೂಲಕ ಸಹಕರಿಸಬೇಕು ಎಂದು ಗ್ರೇಡ್-೨ ತಹಸೀಲ್ದಾರ್ ವೆಂಕಟೇಶ ದುಗ್ಗನ್ ಹೇಳಿದರು.

    ತಹಸಿಲ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ತಹಸಿಲ್ ಕಚೇರಿಯಲ್ಲಿ ಈಗಾಗಲೇ ಕೌಂಟರ್ ತೆರೆಯಲಾಗಿದೆ. ಉಚಿತವಾಗಿ ನಮೂನೆ ೧೮ ಪಡೆದು ದಾಖಲೆಗಳೊಂದಿಗೆ ಸಲ್ಲಿಸಬೇಕು. ಅ.೩೦ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ೨೦೧೯ರಲ್ಲಿ ಸುಲೇಪೇಟ- ೫೯೦, ಐನಾಪುರ-೩೫೯, ಚಿಂಚೋಳಿ-೬೮೩ ಸೇರಿ ೧೬೨೨ ಪದವೀಧರರು ಹಕ್ಕು ಚಲಾಯಿಸಿದ್ದರು. ಇದೀಗ ಇವರೆಲ್ಲರೂ ಮರು ಅರ್ಜಿ ಸಲ್ಲಿಸಬೇಕು ಎಂದರು.

    ಇಲ್ಲಿವರೆಗೂ ೫೨ ಪದವೀಧರರು ವೋಟಿಂಗ್ ಲಿಸ್ಟ್ನಲ್ಲಿ ಹೆಸರು ಸೇರಿಸಿದ್ದು, ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಪಡೆದು ನೋಂದಣಿಗೆ ಮುಂದಾಗಬೇಕು. ಈ ಹಿಂದಿನಂತೆ ಐನಾಪುರ, ಸುಲೇಪೇಟ, ಕೋಡ್ಲಿ, ಕಾಳಗಿ, ಚಿಂಚೋಳಿಯಲ್ಲಿ ಮತಕೇಂದ್ರ ಸ್ಥಾಪಿಸುವುದಾಗಿ ತಿಳಿಸಿದರು.

    ತಾಪಂ ಮಾಜಿ ಸದಸ್ಯ ರಾಮರಾವ ರಾಠೋಡ್, ಪ್ರಮುಖರಾದ ಗೌತಮ ಬೊಮ್ಮನಳ್ಳಿ, ರವಿ ಪಾಟೀಲ್, ಎಂ.ಕೆ.ಮಗ್ದೂಮ್, ಶ್ರೀನಿವಾಸ ಚಿಂಚೋಳಿಕರ್, ಗೌತಮ ಹೂಡದಳ್ಳಿ, ಶಾಮರಾವ ಚಿಂಚೋಳಿ, ನಾಗೇಶ ಗುಣಾಜಿ, ಎಂ.ಪಿ. ರಾಮರಾವ, ಮಹಿಬೂಬ್ ಪಟೇಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts