More

    ಜನ್ಮಸಿದ್ಧ ಹಕ್ಕು ಮತದಾನ ಮಾಡಿ

    ಚಿಂಚೋಳಿ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಕಾರ್ಮಿಕರಿಗೆ ಮತದಾನದಂದು ಖಾಸಗಿ ಕಂಪನಿ ಮಾಲಿಕತ್ವದ ಎಲ್ಲ ಮಾಲಿಕರು ರಜೆ ಘೋಷಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

    ರೋಡ ಕಲ್ಲೂರದ ಬಳಿಯ ಚೆಟ್ಟಿನಾಡು ಸಿಮೆಂಟ್ ಕಂಪನಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಸ್ವೀಪ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನ ಪ್ರತಿ ನಾಕರೀಕನ ಸ್ವಾಭಿಮಾನದ ಪ್ರತೀಕ ಎಂದರು.
    ಕಾರ್ಮಿಕರು ತಮ್ಮ ಗ್ರಾಮಗಳಿಗೆ ಒಂದು ದಿನ ಮುಂಚೆಯೇ ತೆರಳಿ ಮತದಾನ ಮಾಡಬೇಕು. ನಿರ್ಲಕ್ಷಿಸಬೇಡಿ. ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು ಎಂದು ಹೇಳಿದರು.

    ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ, ಡಿಎಸ್ಪಿ ಸಂಗಮನಾಥ ಹಿರೇಮಠ, ಚುನಾವಣಾ ಸಹಾಯಕ ಅಧಿಕಾರಿ ಸಂತೋಷ ಇನಾಮದಾರ್, ಎಸಿ ಹಾಶಪ್ಪ ಪೂಜಾರಿ, ಶಂಕರ ರಾಠೋಡ್, ತಹಸೀಲ್ದಾರ್ ಮಲ್ಲಿಕಾರ್ಜುನ, ಪ್ರಮುಖರಾದ ವೆಂಕಟೇಶ ದುಗ್ಗನ್, ಶೇಖರ್ ಬಾಬು, ದಶರಥ ಪಾತ್ರೆ, ಎಚ್.ಎಲ್. ಗೌಂಡಿ, ಪಿಎಸ್‌ಐ ಶಿವರಾಜ ಪಾಟೀಲ್, ಸುಭಾಷ ಸುಲೇಪೇಟ, ರಾಜಶೇಖರ ಬಿರಾದಾರ, ರೇವಣಸಿದ್ದಪ್ಪ ಪಾಟೀಲ್, ಆನಂದಕುಮಾರ ಬಾಸುಕೋಡ, ಮಲ್ಲಿಕಾರ್ಜುನ, ಕಲ್ಯಾಣಪ್ಪ, ಪ್ರಭು, ಬಸವರಾಜ, ಸೂರ್ಯಕಾಂತ, ಜಗನ್ನಾಥ ಇತರರಿದ್ದರು.

    ತೆಲಂಗಾಣ ಗಡಿಯಲ್ಲಿ ಹದ್ದಿನ ಕಣ್ಣು: ಚಿಂಚೋಳಿ ತಾಲೂಕಿನ ಮಿರಿಯಾಣದ ತೆಲಂಗಾಣ ಗಡಿಯಲ್ಲಿನ ಚೆಕ್‌ಪೋಸ್ಟ್​ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಎಸ್ಪಿ ಅಕ್ಷಯ ಹಾಕೆ ಭೇಟಿ ನೀಡಿ ಪರಿಶೀಲಿಸಿದರು. ತೆಲಂಗಾಣದಿಂದ ಬರುವ ವಾಹನಗಳನ್ನು ಕೆಲ ನಿಮಿಷ ತಪಾಸಣೆ ನಡೆಸಿ, ಚುನಾವಣೆ ನಿಯಮಗಳ ಕುರಿತು ಜಾಗೃತಿಗೊಳಿಸಿ ಎಸ್‌ಎಸ್‌ಟಿ ತಂಡದ ಅಧಿಕಾರಿಗಳಿಗೆ ಕಡ್ಡಾಯವಾಗಿ ತಪಾಸಣೆ ನಡೆಸಬೇಕು ಎಂದು ಸೂಚನೆ ನೀಡಿದರು. ಮುಲಾಜಿಲ್ಲದೆ ನಿಯಮ ಮೀರಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪಾಲಿಸುವಂತೆ ಸೂಚಿಸಬೇಕು ಎಂದು ಸಿಬ್ಬಂದಿಗೆ ಎಚ್ಚರಿಸಿದರು. ಸ್ಟ್ರಾಂಗ್ ರೂಮ್, ತಹಸಿಲ್​ ಕಚೇರಿ, ಸುಲೇಪೇಟ ಸೇರಿ ವಿವಿಧೆಡೆ ಸಂಚರಿಸಿ ತಪಾಸಣೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts