More

    ಕರಸೇವಕರ ಕೊಡುಗೆ ಅವಿಸ್ಮರಣೀಯ

    ಚಿಂಚೋಳಿ: ಅಯೋಧ್ಯೆಯಲ್ಲಿ ೫೦೦ ವರ್ಷಗಳ ನಂತರ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ದೇವರ ಭವ್ಯ ಮಂದಿರ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತಿರುವುದು ಎಲ್ಲರ ಸೌಭಾಗ್ಯಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.

    ಪಟ್ಟಣದ ಚಂದಾಪುರದ ಶ್ರೀರಾಮ ನಗರದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿಯಿಂದ ಬುಧವಾರ ಹಮ್ಮಿಕೊಂಡ ಮಂತ್ರಾಕ್ಷತೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದುಗಳ ಆರಾಧ್ಯ ದೈವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕರಸೇವಕರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

    ಮತಕ್ಷೇತ್ರದ ಕಾಳಗಿ ಹಾಗೂ ಚಿಂಚೋಳಿ ತಾಲೂಕಿನ ಪ್ರತಿ ಹಳ್ಳಿ ಮತ್ತು ತಾಂಡಾಗಳಲ್ಲಿ ಜ.೭ರಂದು ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ತಲುಪಿಸಬೇಕು. ೨೨ರಂದು ಮನೆ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶ್ರೀ ರಾಮನ ಆಶೀರ್ವಾದಕ್ಕೆ ಪಾತ್ರರಾಗಬೇಕು. ಕ್ಷೇತ್ರದ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ಕೀರ್ತಿನೆ ನಡೆಸಿ ಶ್ರೀರಾಮ ಜಪದಲ್ಲಿ ತೊಡಗಬೇಕು ಎಂದು ಹೇಳಿದರು.

    ಆರ್‌ಎಸ್‌ಎಸ್‌ನ ಜಿಲ್ಲಾ ಸಂಯೋಜಕ ಅಶೋಕ ಪಾಟೀಲ್ ಮಾತನಾಡಿದರು.

    ಬಿಜೆಪಿ ಹಿರಿಯ ಮುಖಂಡ ಗೌತಮ ಪಾಟೀಲ್, ತಾಲೂಕು ಅಧ್ಯಕ್ಷ ಸಂತೋಷ ಗಡಂತಿ, ಪ್ರಮುಖರಾದ ಗೋಪಾಲರಾವ ಕಟ್ಟಿಮನಿ, ಶಾಂತರೆಡ್ಡಿ ನರನಾಳ, ಭೀಮಶೆಟ್ಟಿ ಮುರುಡಾ, ಸಂಗೀತಾ, ರೇವಣಸಿದ್ದಪ್ಪ ಮೋಘಾ, ಗಿರಿರಾಜ ನಾಟೀಕಾರ, ರಾಕೇಶ ಗೋಸೂಲ್, ಶ್ರೀಹರಿ ಕಾಟಾಪುರ, ಅನಿಲ ಕಂಟ್ಲಿ, ಉದಯ ಸಿಂಧೋಲ್, ಮಹಾರುದ್ರಯ್ಯ ಸ್ವಾಮಿ, ಚಂದು ಹೂಡದಳ್ಳಿ, ಲೋಕೇಶ ಶೆಳ್ಳಗಿ, ಅಭಿಷೇಕ ಮಲಕನೂರ, ಹರ್ಷವರ್ಧನ ಮ್ಯಾಕಲ್, ಗುರುರಾಜ ಜೋಶಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts