More

    ಬೆಕ್ಕು, ನಾಯಿ ತಿನ್ನುವುದನ್ನು ನಿಷೇಧಿಸಿದ ಚೇನಾದ ಶೆನ್ಜೆನ್​ ನಗರ: ಉಳಿದ ಪ್ರಾಣಿಗಳ ಮಾರಾಟ ಮುಕ್ತವೇಕೆ?

    ಶೆನ್ಜೆನ್​: ಮಹಾಮಾರಿ ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಚೀನಾದ ಶೆನ್ಜೆನ್​ ನಗರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇನ್ನು ಮುಂದೆ ಬೆಕ್ಕು ಮತ್ತು ನಾಯಿ ಮಾಂಸ ತಿನ್ನುವುದನ್ನು ಬ್ಯಾನ್​ ಮಾಡಿದೆ.

    ಕರೊನಾ ವೈರಸ್​ ಪ್ರಾಣಿಗಳಿಂದ ಮಾನವನಿಗೆ ಹರಡಿದೆ ಎಂದು ವಿಜ್ಞಾನಿಗಳು ಶಂಕಿಸಿದ್ದಾರೆ. ಹುಬೇ ಪ್ರಾಂತ್ಯದ ಕೇಂದ್ರ ವುಹಾನ್​ನಲ್ಲಿನ ಜೀವಂತ ಪ್ರಾಣಿ ಮಾರುಕಟ್ಟೆಯಿಂದ ವೈರಸ್​ ಸ್ಪೋಟಗೊಂಡಿದೆ ಎಂಬ ಅನೇಕ ವಾದಗಳು ಈಗಾಗಲೇ ಮಂಡನೆಯಾಗಿವೆ. ವುಹಾನ್​ ಮಾರುಕಟ್ಟೆಯಲ್ಲಿ ಬಾವಲಿ, ಹಾವು, ಸಿವೆಟ್​ ಹಾಗೂ ಪ್ಯಾಂಗೋಲಿನ್​ ಸೇರಿದಂತೆ ಅನೇಕ ಪ್ರಾಣಿಗಳನ್ನು ಮಾರಾಟ ಮಾಡಲಾಗುತ್ತದೆ. ಬಾವಲಿಯಿಂದ ಮಾನವನಿಗೆ ವೈರಸ್ ಹರಡಲು ಪ್ಯಾಂಗೋಲಿನ್​ ಮಧ್ಯವರ್ತಿಯಾಗಿ ಕೆಲಸ ಮಾಡಿದೆ ಎಂದು ಹಿಂದೊಮ್ಮೆ ಸಂಶೋಧನಾ ವರದಿಯೊಂದು ತಿಳಿಸಿತ್ತು.

    ಕರೊನಾ ವೈರಸ್​ ಸೋಂಕು ವಿಶ್ವದಾದ್ಯಂತ 9 ಲಕ್ಷಕ್ಕೂ ಹೆಚ್ಚು ಮಂದಿಗೆ ತಗುಲಿದ್ದು, ಈಗಾಗಲೇ 47 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. ಅಮೆರಿಕ, ಇಟಲಿ ಹಾಗೂ ಸ್ಪೇನ್​ನಲ್ಲಿ ಮರಣ ಮೃದಂಗ ಮುಂದುವರಿದಿದೆ. ವೈರಸ್​ ಹುಟ್ಟಿದ ಚೀನಾವನ್ನೇ ಸಾವಿನ ಸಂಖ್ಯೆಯಲ್ಲಿ ಹಿಂದಿಕ್ಕಿವೆ.

    ವೈರಸ್​ ಹಡುವಿಕೆಗೆ ಮೂಲ ಕಾರಣ ಪ್ರಾಣಿಗಳೇ ಎಂಬ ಬಲವಾದ ವಾದ ಮಂಡನೆ ಆಗುತ್ತಿರುವ ನಡುವೆಯೇ ದಕ್ಷಿಣ ಚೀನಾ ಟೆಕ್ನಾಲಜಿ ಹಬ್​ ಅಧಿಕಾರಿಗಳು ಮೇ 1ರಿಂದ ಜಾರಿಗೆ ಬರುವಂತೆ ಬೆಕ್ಕು ಮತ್ತು ನಾಯಿ ಮಾಂಸವನ್ನು ತಿನ್ನುವುದನ್ನು ಬ್ಯಾನ್​ ಮಾಡಿದೆ.

    ಇತರೆ ಪ್ರಾಣಿಗಳಿಗೆ ಹೋಲಿಸಿದರೆ ನಾಯಿ ಮತ್ತು ಬೆಕ್ಕು ಮಾನವನಿಗೆ ತುಂಬಾ ಹತ್ತಿರವಾದಂತಹ ಜೀವಿಗಳಾಗಿವೆ. ಹಾಂಕ್​ಕಾಂಗ್​ ಮತ್ತು ತೈವಾನ್​ನಲ್ಲೂ ಕೂಡ ಇದೇ ಅಭ್ಯಾಸವನ್ನು ಅನುಸರಿಸಲಾಗುತ್ತಿದೆ. ಈ ಒಂದು ನಿರ್ಧಾರವು ಮಾನವ ನಾಗರಿಕತೆಯ ಬೇಡಿಕೆಗೂ ಸ್ಪಂದಿಸುವಂತಿದೆ. ಏಷ್ಯಾದ ಅನೇಕ ಭಾಗಗಳಲ್ಲಿ ನಾಯಿ ಮಾಂಸವನ್ನು ಸೇವಿಸಲಾಗುತ್ತಿತ್ತು. ಇದೀಗ ಶೆನ್ಜೆನ್​ ನಗರದಲ್ಲಿ ನಾಯಿ ಮತ್ತು ಬೆಕ್ಕಿನ ಮಾಂಸವನ್ನು ನಿಷೇಧಿಸಲಾಗಿದ್ದು, ಉಳಿದಂತೆ ಪೌಲ್ಟ್ರಿ, ಜಾನುವಾರು ಮತ್ತು ಸಮುದ್ರ ಜೀವಿ ಆಹಾರ ಎಂದಿನಂತೆ ದೊರೆಯಲಿದೆ ಎಂದು ಶೆನ್ಜೆನ್​ ನಗರದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

    ನಿಮಗಾಗಿ ನನ್ನ ತಂದೆ ನಮ್ಮಿಂದ ದೂರವಿದ್ದಾರೆ, ನೀವೂ ಸಹಾಯ ಮಾಡುವಿರಾ?: ಬಾಲಕಿಯ ಸಂದೇಶಕ್ಕೆ ಮನಸೋತ ಕೇಂದ್ರ ಸಚಿವ!

    ಹುಟ್ಟಿದ ಮೂರೇ ದಿನಕ್ಕೆ ಕರೊನಾ ವೈರಸ್​ಗೆ ಒಳಗಾದ ಶಿಶು; ಅದರ ಅಮ್ಮನಿಗಿಲ್ಲ ಸೋಂಕು, ವೈದ್ಯರನ್ನು ಪ್ರಶ್ನಿಸಿದ್ದಕ್ಕೆ ಸಿಕ್ಕಿದ್ದು ಅಸ್ಪಷ್ಟ ಉತ್ತರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts