More

    ತನ್ನದೇ ಯೋಧರ ಕುಟುಂಬಗಳಿಗೆ ಉತ್ತರ ಕೊಡಲಾಗದೇ ತತ್ತರಿಸುತ್ತಿದೆ ಚೀನಾ

    ನವದೆಹಲಿ: ಭಾರತದೊಂದಿಗಿನ ಹಿಂಸಾತ್ಮಕ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಚೀನಾ ಇಂದಿಗೂ ಬಹಿರಂಗಪಡಿಸಿಲ್ಲ. ಮೃತ ಯೋಧರ ಕುಟುಂಬಗಳನ್ನು ಸಂತೈಸಲು ಇನ್ನಿಲ್ಲದ ಹೆಣಗಾಟ ನಡೆಸುತ್ತಿದೆ.

    ದೇಶಕ್ಕಾಗಿ ಜೀವವನ್ನೇ ಬಲಿಕೊಟ್ಟರೂ, ಸರ್ಕಾರ ಅವರ ಸೇವೆಯನ್ನು ಪರಿಗಣಿಸುತ್ತಿಲ್ಲ. ಅವರಿಗೆ ಸರ್ಕಾರಿ ಗೌರವ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧವೇ ಚೀನಿ ಸೈನಿಕರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.

    ಇದನ್ನೂ ಓದಿ; ಭಾರತದ ನೆರವಿಗೆ ಬರಲಿದೆ ಅಮೆರಿಕ ಸೇನೆ; ಚೀನಾ ಸವಾಲು ಎದುರಿಸಲು ನಿಯೋಜನೆ

    ಮೃತ ಯೋಧರ ಕುಟುಂಬವೊಂದು ಸರ್ಕಾರದ ವಿರುದ್ಧ ಹರಿಹಾಯ್ದ ವಿಡಿಯೋವೊಂದು ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಎಚ್ಚೆತ್ತುಕೊಂಡ ಕಮ್ಯುನಿಸ್ಟ್​ ಪಕ್ಷ ಮುಖವಾಣಿಯಾಗಿರುವ ಗ್ಲೋಬಲ್​ ಟೈಮ್ಸ್​ ಪತ್ರಿಕೆ ಅವರಿಗೆ ಸಾಂತ್ವನ ಹೇಳಲು ಮುಂದಾಗಿದೆ.

    ಮೃತ ಯೋಧರಿಗೆ ಎಲ್ಲ ರೀತಿಯ ಸೇನಾ ಗೌರವನ್ನು ಸಲ್ಲಿಸಲಾಗಿದೆ. ಈ ಕುರಿತ ಮಾಹಿತಿಯನ್ನು ಸರಿಯಾದ ಸಮಯದಲ್ಲಿ ಸಮಾಜಕ್ಕೆ ತಲುಪಿಸಲಾಗುತ್ತದೆ ಎಂದು ಹೇಳಿದೆ. ಆದರೆ, ಯೋಧರಿಗೆ ಸರ್ಕಾರಿ ಗೌರವ ಸಲ್ಲಿಸಲಾಗಿರುವ ಕುರಿತು ಸರ್ಕಾರ ಯಾವುದೇ ವಿಚಾರವನ್ನು ಬಹಿರಂಗಪಡಿಸಿಲ್ಲ.

    ಇದನ್ನೂ ಓದಿ; ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ

    ಭಾರತೀಯ ಯೋಧರಿಗೆ ಅವರ ಸರ್ಕಾರ ಸಲ್ಲಿಸಿರುವ ಗೌರವ ಹಾಗೂ ಮಾನ್ಯತೆಯಿಂದ ನಮ್ಮ ಯೋಧರು ವಂಚಿತರಾಗಿದ್ದಾರೆ ಎಂದು ಚೀನಿ ಕುಟುಂಬಗಳು ಅಸಮಾಧಾನ ವ್ಯಕ್ತಪಡಿಸಿವೆ. ಇಷ್ಟಾದರೂ, ಮೃತಪಟ್ಟವರೆಷ್ಟು ಎಂದು ಚೀನಾ ಸರ್ಕಾರ ಅಧಿಕೃತವಾಗಿ ತಿಳಿಸಿಲ್ಲ. ಬದಲಾಗಿ 20ಕ್ಕಿಂತಲೂ ಕಡಿಮೆ ಎಂದು ಪತ್ರಿಕೆ ಹೇಳಿಕೊಂಡಿದೆ.

    ಈ ನಡುವೆ, ಭಾರತೀಯ ಯೋಧರು ಚೀನಾದ 16 ಸೈನಿಕರ ಶವಗಳನ್ನು ಚೀನಾಗೆ ಹಸ್ತಾಂತರಿಸಿದ್ದಾರೆ ಎಂಬ ವಾದವನ್ನು ಅಲ್ಲಗೆಳೆದಿದೆ.

    ಲಾಕ್​ಡೌನ್​ ಮರೆತು ಬಿಡಿ, ಅನ್​ ಲಾಕ್​ಡೌನ್ 2.0 ಗೆ ಸಿದ್ಧರಾಗಿ; ಶಾಲಾ- ಕಾಲೇಜು, ಮೆಟ್ರೋ ಆರಂಭಕ್ಕೆ ಮಾರ್ಗಸೂಚಿ ಸಜ್ಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts