More

    ಕರೋನಾ ತಪ್ಪು ಸಾಬೀತಾದರೂ ಪರಿಹಾರ ಕೊಡಲ್ಲ ಎಂದ ಚೀನಾ

    ಬೀಜಿಂಗ್​: ಜಾಗತಿಕವಾಗಿ ಮಾರಣಹೋಮಕ್ಕೆ ಕಾರಣವಾಗುತ್ತಿರುವ ಕರೋನಾ ವೈರಾಣು ತಮ್ಮ ದೇಶದಲ್ಲೇ ಉಗಮಿಸಿದ್ದರೂ ಚೀನಾದ ಮುಖಂಡರು ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಇದೀಗ ಆ ಬಗ್ಗೆ ಜಾಗತಿಕ ತನಿಖೆಗೆ ಒಪ್ಪಿಕೊಂಡಿದ್ದರೂ, ತಮ್ಮ ರಾಷ್ಟ್ರ ಯಾವುದೇ ಕಾರಣಕ್ಕೂ ಪರಿಹಾರ ಕೊಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವ ವ್ಯಾಂಗ್​ ಯೀ ಹೇಳಿದ್ದಾರೆ.

    13ನೇ ನ್ಯಾಷನಲ್​ ಪೀಪಲ್ಸ್​ ಕಾಂಗ್ರೆಸ್​ನ ಹಿನ್ನೆಲೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ಪರಿಹಾರ ಕೊಡುತ್ತದೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ ಎಂದು ಹೇಳಿದರು.

    ವ್ಯಾಂಗ್​ ಯೀ ಹೇಳಿಕೆಯನ್ನು ಗಮನಿಸಿದಾಗ ಚೀನಾದ ವಿದೇಶಾಂಗ ನೀತಿಯ ತಳಹದಿ ತುಂಬಾ ಗಟ್ಟಿಯಾಗಿರುವುದು ಸ್ಪಷ್ಟವಾಗುತ್ತದೆ. ಇದಕ್ಕೂ ಮುನ್ನ ಚೀನಾದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಕರೊನಾ ವೈರಾಣುವಿನ ಮೂಲದ ಅಂತಾರಾಷ್ಟ್ರೀಯ ತನಿಖೆಗೆ ತಮ್ಮ ದೇಶ ಮುಕ್ತವಾಗಿದೆ ಎಂದು ಹೇಳಿದ್ದರು.

    ಇದನ್ನೂ ಓದಿ: Video: ಹೃದಯಾಘಾತಕ್ಕೆ ಒಳಗಾಗಿದ್ದ ಬೀದಿನಾಯಿಗೆ ಮರುಜೀವ ನೀಡಿದ ಯುವಕ

    ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೊನಾ ಪಿಡುಗಿಗೆ ಚೀನಾವೇ ಕಾರಣ ಎಂದು ನಿರಂತರವಾಗಿ ದೂಷಿಸುತ್ತಿರುವ ಹಿನ್ನೆಲೆಯಲ್ಲಿ ಚೀನಾ ವಿದೇಶಾಂಗ ಸಚಿವರ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

    ಈ ವಿಷಯವಾಗಿ ಉಭಯ ರಾಷ್ಟ್ರಗಳು ಪರಸ್ಪರ ಕೆಸೆರೆಚಾಟದಲ್ಲಿ ತೊಡಗಿಕೊಂಡಿವೆ. ಈ ಪಿಡುಗಿಗೆ ಪರಸ್ಪರರನ್ನು ಹೊಣೆಯಾಗಿಸಲು ಚೀನಾ ಮತ್ತು ಅಮೆರಿಕ ನಿರಂತರವಾಗಿ ಪ್ರಯತ್ನಿಸುತ್ತಿವೆ. ಡೊನಾಲ್ಡ್​ ಟ್ರಂಪ್​ ಅವರಂತೂ ಚೀನಾದ ವುಹಾನ್​ನಲ್ಲಿ ಈ ವೈರಾಣುವನ್ನು ಸೃಷ್ಟಿಸಲಾಗಿದೆ. ಅದು ಆಕಸ್ಮಿಕವಾಗಿ ಸೋರಿಕೆಯಾಗಿ ಜಾಗತಿಕವಾಗಿ ಹಬ್ಬಿದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಚೀನಾ ಇದನ್ನು ಅಲ್ಲಗಳೆಯುತ್ತಲೇ ಬರುತ್ತಿದೆ.

    ಇದಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿಜಿಯಾನ್​ ಝಾವೋ ಅಮೆರಿಕದ ಯೋಧರೇ ಈ ವೈರಾಣುವನ್ನು ಚೀನಾಕ್ಕೆ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ನಂತರದಲ್ಲಿ ಅದು ಚೀನಾದಿಂದಲೇ ಮನುಷ್ಯರಿಂದ ಮನುಷ್ಯರಿಗೆ ಹಬ್ಬುತ್ತಾ ಇಡೀ ವಿಶ್ವವನ್ನೇ ಆವರಿಸಿತು ಎಂಬುದು ಸಾಬೀತಾಗಿತ್ತು.

    ಭಾರತದಲ್ಲಿ ಲಾಕ್​ಡೌನ್​ ಸಾಮಾಜಿಕ ರೋಗನಿರೋಧಕ ಚುಚ್ಚುಮದ್ದಿನಂತೆ ಕೆಲಸ ಮಾಡಿದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts