More

    ಪ್ರಧಾನಿ ಮೋದಿ ಲಡಾಖ್​ ಭೇಟಿಗೆ ಚೀನಾ ಆಕ್ಷೇಪ, ನಮ್ಮನ್ನು ಕೆರಳಿಸಬೇಡಿ ಎಂದ ಡ್ರ್ಯಾಗನ್​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್​ ಲೇಹ್​ ಭೇಟಿಗೆ ಚೀನಾ ಭಾರಿ ಆಕ್ಷೇಪ ವ್ಯಕ್ತಪಡಿಸಿದೆ. ಲಡಾಖ್​ನಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಪ್ರಧಾನಿ ಮೋದಿ ಅವರ ಭೇಟಿಯಂಥ ಕ್ರಮಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತವೆ. ಆದ್ದರಿಂದ, ಇಂಥ ಕ್ರಮಗಳನ್ನು ಸಾಧ್ಯವಾದಷ್ಟು ತೆಗೆದುಕೊಳ್ಳದಿರಿ ಎಂದು ಪುಕ್ಕಟ್ಟೆ ಸಲಹೆಯನ್ನೂ ಕೊಟ್ಟಿದೆ.

    ಟ್ವಿಟ್ಟರ್​ ಸಂದೇಶದಲ್ಲಿ ಪ್ರಧಾನಿ ಮೋದಿ ಭೇಟಿಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಹೊ ಲಿಜಿಯನ್​, ಲಡಾಖ್​ನಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಣಿಸುವ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆ ನಡೆಸುತ್ತಿವೆ. ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುವ ರೀತಿಯಲ್ಲಿ ಅಥವಾ ಪ್ರಚೋದಿಸುವ ರೀತಿಯ ವರ್ತನೆಗಳು ಸಲ್ಲದು ಎಂದು ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಿಂದ ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಮತ್ತು ಸಿಡಿಎಸ್​ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​ ಅವರ ಜತೆಗೂಡಿ ಲೇಹ್​ನ ಮುಂಚೂಣಿ ಸೇನಾನೆಲೆ ನೀಮುಗೆ ಭೇಟಿ ಕೊಟ್ಟು, ಅಲ್ಲಿ ನಿಯೋಜನೆಗೊಂಡಿರುವ ಭಾರತೀಯ ವಾಯುಪಡೆ, ಸೇನಾಪಡೆ ಮತ್ತು ಐಟಿಬಿಪಿ ಯೋಧರ ಜತೆ ಮಾತುಕತೆ ನಡೆಸಿದರು. ಇದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ.

    ಆಗಸ್ಟ್​ 15ಕ್ಕೆ ಕೋವಿಡ್​-19 ಮಹಾಮಾರಿಯಿಂದ ಬಿಡುಗಡೆ ನಿಶ್ಚಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts