More

    ಆಕ್ರೋಶ ವ್ಯಕ್ತವಾದರೂ ಮಡಿದ ಯೋಧರ ಬಗ್ಗೆ ನಿಖರ ಮಾಹಿತಿ ನೀಡದ ಚೀನಾ

    ನವದೆಹಲಿ/ಬೀಜಿಂಗ್​: ಲಡಾಖ್​ನ ಪೂರ್ವಭಾಗದ ಗಲ್ವಾನ್​ ಕಣಿವೆಯಲ್ಲಿ ಜೂ.15ರಂದು ನಡೆದ ರಕ್ತಸಿಕ್ತ ಘರ್ಷಣೆಯಲ್ಲಿ ಮಡಿದ ತನ್ನ ಯೋಧರ ಕುಟುಂಬ ವರ್ಗದವರನ್ನು ಸಂತೈಸಲು ಚೀನಾ ಇದೀಗ ಮುಂದಾಗಿದೆ. ಅದರೂ ಘರ್ಷಣೆಯಲ್ಲಿ ಮಡಿದ ತನ್ನ ಯೋಧರ ನಿಖರ ಲೆಕ್ಕವನ್ನು ಕೊಡಲು ಅದು ನಿರಾಕರಿಸಿದೆ.

    ಮಡಿದ ಪೀಪಲ್ಸ್​ ಲಿಬರೇಷನ್​ ಆರ್ಮಿಯ (ಪಿಎಲ್​ಎ) ಯೋಧರಿಗೆ ಯಾವುದೇ ರೀತಿಯ ಗೌರವಾರ್ಪಣೆ ಮಾಡದಿರುವ ಬಗ್ಗೆ ಚೀನಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ. ಈ ಬಗ್ಗೆ ಯೋಧರ ಕುಟುಂಬ ವರ್ಗದವರು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಡಿಯೋ ತುಣುಕು ಬಹಿರಂಗಗೊಂಡ ಎರಡು ದಿನಗಳ ನಂತರದಲ್ಲಿ ಚೀನಾದ ಮುಖವಾಣಿ ಗ್ಲೋಬಲ್​ ಟೈಮ್ಸ್​ ಪತ್ರಿಕೆಯಲ್ಲಿ ಈ ಬಗ್ಗೆ ಸಂಪಾದಕೀಯ ಪ್ರಕಟವಾಗಿದೆ.

    ಮಡಿದ ಯೋಧರ ಅಂತ್ಯಸಂಸ್ಕಾರವನ್ನು ಅತ್ಯಂತ ಗೌರವಯುತವಾಗಿ ಮಾಡಲಾಗಿದೆ. ಈ ಘರ್ಷಣೆಯಲ್ಲಿ ಮಡಿದ ಯೋಧರು ಎಷ್ಟು, ಯಾರೆಂಬ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸಿ, ಅವರೆಲ್ಲರಿಗೂ ಗೌರವಾರ್ಪಣೆ ಮಾಡಲಾಗುವುದು ಎಂದು ಹ್ಯು ಕ್ಸಿಜಿನ್​ ಸಂಪಾದಕೀಯದಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ನಾನು ಇಂದಿರಾ ಗಾಂಧಿ ಮೊಮ್ಮಗಳು, ಅದೇನು ಮಾಡ್ಕೋತೀರೋ ಮಾಡ್ಕೊಳಿ…

    ಈ ಘರ್ಷಣೆಯಲ್ಲಿ ಪಿಎಲ್​ಎನ 20ಕ್ಕಿಂತ ಕಡಿಮೆ ಯೋಧರು ಮಡಿದಿರುವುದಾಗಿ ಸರ್ಕಾರ ನೀಡುತ್ತಿರುವ ಹೇಳಿಕೆಯನ್ನು ಅವರು ಪುನರುಚ್ಚರಿಸಿದ್ದಾರೆ.

    ಭಾರತೀಯ ಮಾಧ್ಯಮಗಳಲ್ಲಿ ಪಿಎಲ್​ಎನ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ. ಭಾರತೀಯ ಯೋಧರೇ 16 ಶವಗಳನ್ನು ಚೀನಾಕ್ಕೆ ಹಸ್ತಾಂತರಿಸಿದ್ದಾರೆ ಎಂದು ಭಾರತೀಯ ಮಾಧ್ಯಮಗಳು ಮಾಡಿರುವ ವರದಿಯನ್ನು ತಳ್ಳಿಹಾಕಿರುವ ಅವರು, ಇದು ಯಾವುದೂ ನಂಬಲರ್ಹ ಮಾಹಿತಿಯಲ್ಲ ಎಂದು ಹೇಳಿದ್ದಾರೆ.

    ಆ್ಯಪ್‌ ಮೂಲಕ ಟಿ.ವಿ ಚಾನೆಲ್‌ ಆಯ್ಕೆ: ಟೆಲಿಕಾಂ ಪ್ರಾಧಿಕಾರದಿಂದ ಗುಡ್‌ ನ್ಯೂಸ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts