More

    ಚೀನಾದಲ್ಲಿ ಮರಣ ಮೃದಂಗ ಮುಂದುವರಿಸಿದ ಕೊರೊನಾ ವೈರಸ್​: ಸಾವಿನ ಸಂಖ್ಯೆ 56ಕ್ಕೆ ಏರಿಕೆ, 688 ಹೊಸ ಪ್ರಕರಣ ಪತ್ತೆ

    ವುಹಾನ್​: ಚೀನಾದಲ್ಲಿ ಪತ್ತೆಯಾಗಿರುವ ಅಪಾಯಕಾರಿ “ಕೊರೊನಾ ವೈರಸ್​” ಮರಣ ಮೃದಂಗವನ್ನು ಮುಂದುವರಿಸಿದ್ದು, ಈವರೆಗೆ ಒಟ್ಟು 56 ಮಂದಿಯನ್ನು ಬಲಿಪಡೆದುಕೊಂಡಿದೆ. ಚೀನಾದ್ಯಂತ 2000 ಜನರು ವೈರಸ್​ ಸೋಂಕಿಗೆ ತುತ್ತಾಗಿರುವುದಾಗಿ ಅಧಿಕಾರಿಗಳು ಭಾನುವಾರ ಮಾಹಿತಿ ನೀಡಿದ್ದಾರೆ.

    ಹೊಸದಾಗಿ ಪತ್ತೆಯಾದ 688 ಕೊರೊನಾ ವೈರಸ್​ ಪ್ರಕರಣಗಳಲ್ಲಿ 15ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ರಾಷ್ಟ್ರೀಯ ಆರೋಗ್ಯ ಆಯೋಗದಿಂದ ಧೃಡವಾಗಿದೆ. ಹೊಸದಾಗಿ ಸಾವಿಗೀಡಾದವರಲ್ಲಿ ಹುಬೇನಲ್ಲಿ 13 ಹಾಗೂ ಶಾಂಘೈನಲ್ಲಿ ಮೊದಲ ಸಾವು ಎಂದು ವರದಿಯಾಗಿದೆ.

    ಒಟ್ಟು 56 ಸಾವಿನ ಪ್ರಕರಣಗಳಲ್ಲಿ ಹುಬೇನಲ್ಲಿ 52 ಮಂದಿ ಅಸುನೀಗಿದ್ದರೆ, ಕೇಂದ್ರ ಹೆನಾನ್​ ಪ್ರಾಂತ್ಯದಲ್ಲಿ ಇಬ್ಬರು, ಈಶಾನ್ಯ ಹೀಲಾಂಗ್ ಜಿಯಾಂಗ್​ನಲ್ಲಿ ಒಬ್ಬರು ಮತ್ತು ದಕ್ಷಿಣ ಹೆಬೇನಲ್ಲಿ ಒಂದು ಪ್ರಕರಣ ದಾಖಲಾಗಿದೆ.

    ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಶನಿವಾರ ಎಚ್ಚರಿಕೆಯನ್ನು ನೀಡಿದ್ದು, ಚೀನಾವು ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಉಸಿರಾಟದ ತೊಂದರೆಯನ್ನುಂಟು ಮಾಡುವ ಮಾರಕ ಕಾಯಿಲೆಯು ದೇಶಾದ್ಯಂತ ಹರಡಿದ್ದು, ಹುಬೇನಲ್ಲಿ ಆರೋಗ್ಯ ಸೌಲಭ್ಯಗಳನ್ನು ಸ್ಥಾಪಿಸಿ, ನಿರಂತರ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts