More

    ಸ್ವಿಸ್​ ಮಹಿಳೆ ಕೊಲೆ ಪ್ರಕರಣ ಭೇದಿಸಿದ ದೆಹಲಿ ಪೊಲೀಸರು: ಕಸದ ಚೀಲದಲ್ಲಿ ಹಾಕಿ ಉಸಿರುಗಟ್ಟಿಸಿ ಕೊಂದಿದ್ದ ಪಾಪಿ

    ನವದೆಹಲಿ: ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಕಸದ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾದ ಸ್ವಿಸ್ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ಭ್ರಮೆಗೊಳಿಸುವ ವಿವರಗಳು ಹೊರಬಿದ್ದಿವೆ.

    ಇದನ್ನೂ ಓದಿ: ಮೊಬೈಲ್​ನಲ್ಲಿ ಮಾತನಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು
    ನೀನಾ ಬರ್ಗರ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರಬಹುದು ಎಂದು ನಂಬಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಪ್ಲಾಸ್ಟಿಕ್ ಚೀಲ ಬಳಸಿ ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂಬ ಅಂಶ ಹೊರಬಿದ್ದಿದೆ. ಈ ವೇಳೆ ಆಕೆಯ ಕೈ, ಕಾಲು ಮತ್ತು ಬಾಯಿಯನ್ನು ಕಟ್ಟಲಾಗಿತ್ತು, ಆಕೆ ನೋವಿನಿಂದ ನರಳುತ್ತಿರುವುದನ್ನು ಕಂಡು ಆರೋಪಿಗಳು ವಿಕೃತ ಆನಂದ ಅನುಭವಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಅ.11ರಂದು ಪಶ್ಚಿಮ ದೆಹಲಿಯ ತಿಲಕ್ ನಗರದ ಸರ್ಕಾರಿ ಶಾಲೆಯ ಬಳಿ ನೀನಾ ಶವ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರ್‌ಪ್ರೀತ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯು ಸ್ವಿಸ್ ಮಹಿಳೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ನಿರಾಕರಿಸಿದ್ದಳು.

    ನಾಲ್ಕು ವರ್ಷಗಳ ಹಿಂದೆ ಒಮೆಗಲ್ (ಸಾಮಾಜಿಕ ಮಾಧ್ಯಮ) ಮೂಲಕ ಮಹಿಳೆಯನ್ನು ಭೇಟಿಯಾಗಿದ್ದಾಗಿ ಆರೋಪಿ ಬಹಿರಂಗಪಡಿಸಿದ್ದಾನೆ. ಆತ ಆಗಾಗ್ಗೆ ನೀನಾ ಬರ್ಗರ್‌ಳನ್ನು ಭೇಟಿ ಮಾಡಲು ಸ್ವಿಟ್ಜರ್‌ಲ್ಯಾಂಡ್‌ಗೆ ಹೋಗುತ್ತಿದ್ದ. ಆಕೆಯ ಜತೆ ಮದುವೆಯಾಗಲು ಇಚ್ಚಿಸಿದ್ದ. ಆದರೆ ಅವಳು ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದಾಳೆಂದು ಆತ ಶಂಕಿಸಿದ್ದ.

    ಹೀಗಾಗಿಯೇ ಗುರ್‌ಪ್ರೀತ್ ಆಕೆಯನ್ನು ಭೇಟಿಯಾಗುವ ನೆಪದಲ್ಲಿ ಸ್ವಿಟ್ಜರ್ಲೆಂಡ್‌ನಿಂದ ಭಾರತಕ್ಕೆ ಕರೆಸಿಕೊಂಡಿದ್ದ. ಆಕೆ ಇಲ್ಲಿಗೆ ಬಂದ ಬಳಿಕ 10 ನಿಮಿಷ ಆಕೆಗೆ ಸರ್ಪ್ರೈಸ್ ನೀಡುವುದಾಗಿ ಹೇಳಿ ಕಾರ್​ನಲ್ಲಿ ಕುಳಿಸಿಕೊಂಡು ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಕಟ್ಟಿಹಾಕಿದ್ದ. ಬಳಿಕ ಕಸದ ಚೀಲದಲ್ಲಿ ಆಕೆಯನ್ನು ಹಾಕಿ ಉಸಿರುಗಟ್ಟಿಸಿದ್ದ. ಆಕೆ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಆರೋಪಿ ವಿಕೃತ ಆನಂದ ಅನುಭವಿಸಿದ್ದ. ಆಕೆ ಸುಮಾರು 30 ನಿಮಿಷ ಜೀವ ಉಳಿಸಿಕೊಳ್ಳಲು ಹೋರಾಡಿದ್ದಾಳೆ. ಆಕೆ ಕಣ್ಣುಗಳು ಚಾಚಿಕೊಂಡಿವೆ. ಇದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ವಾಹನದ ನೋಂದಣಿ ಸಂಖ್ಯೆ ಪತ್ತೆಹಚ್ಚಿದ ಪೊಲೀಸರು ಗುರುಪ್ರೀತ್‌ನನ್ನು ಗುರುತಿಸಿದ್ದರು. ಮೃತದೇಹ ಇರಿಸಲಾಗಿದ್ದ ಕಾರು, ಆತನ ಇನ್ನೊಂದು ನಾಲ್ಕು ಚಕ್ರದ ವಾಹನ, 2.25 ಕೋಟಿ ರೂ.ನಗದು ವಶಪಡಿಸಿಕೊಂಡಿದ್ದಾರೆ.

    ಭ್ರಷ್ಟರಿಗೆ ಬೆಳಂಬೆಳ್ಳಗೆ ಶಾಕ್​ ನೀಡಿದ ಲೋಕಾಯುಕ್ತ; ರಾಜ್ಯದ ಹಲವೆಡೆ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts