More

    ಮೆಗಾ ಮಾರುಕಟ್ಟೆಯತ್ತ ಮೆಣಸಿನಕಾಯಿ ವರ್ತಕರು ಮುಖ ಮಾಡದಿರಲಿ

    ಬ್ಯಾಡಗಿ: ವಿಶ್ವಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಯ ಬೆಳವಣಿಗೆಯಲ್ಲಿ ಸ್ಥಳೀಯ ದಲ್ಲಾಳಿ ಅಂಗಡಿ ಮಾಲೀಕರು, ಖರೀದಿದಾರರು ಹಾಗೂ ರೈತರ ಪಾತ್ರ ಹಿರಿದಾಗಿದ್ದು, ಯಾವುದೇ ಕಾರಣಕ್ಕೂ ಸ್ಥಳೀಯ ಮೆಣಸಿನಕಾಯಿ ವರ್ತಕರು ಹೂಲಿಹಳ್ಳಿ ಬಳಿಯ ಮೆಗಾ ಮಾರುಕಟ್ಟೆಯತ್ತ ಮುಖಮಾಡದೆ, ಸ್ಥಳೀಯ ಮಾರುಕಟ್ಟೆಯ ವ್ಯಾಪಾರಕ್ಕೆ ಸಹಕರಿಸಬೇಕು ಎಂದು ವರ್ತಕರ ಸಂಘದ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ತಿಳಿಸಿದರು.

    ಪ್ರಸಕ್ತ ರಾಜ್ಯ ಬಜೆಟ್​ನಲ್ಲಿ ರಾಣೆಬೆನ್ನೂರ ತಾಲೂಕಿನ ಹೂಲಿಹಳ್ಳಿ ಮೆಗಾ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಅನುಮತಿ ನೀಡಿ ಹಣ ಮೀಸಲಿಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ ಮೆಣಸಿನಕಾಯಿ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು.

    ಬ್ಯಾಡಗಿ ಮಾರುಕಟ್ಟೆಗೆ ನೂರಾರು ವರ್ಷದ ಇತಿಹಾಸವಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಮೆಣಸಿನಕಾಯಿ ಕಂಪು ಹರಡಿದೆ. 1970ರಲ್ಲಿ ಮಾರುಕಟ್ಟೆಗೆ ಕೇವಲ 35 ಲಕ್ಷ ರೂಪಾಯಿ ಆದಾಯ ಸಂಗ್ರಹವಾಗುತ್ತಿತ್ತು. ಈಗ 20 ಕೋ.ರೂ. ಗೂ ಅಧಿಕ ಶುಲ್ಕ ಸಂಗ್ರಹವಾಗುತ್ತಿದೆ. ಮಾರುಕಟ್ಟೆಯಲ್ಲಿ ಸಾವಿರಾರು ಕೋ.ರೂ.ವಹಿವಾಟು ನಡೆದಿದೆ. ಮೆಣಸಿನಕಾಯಿ ಮಸಾಲಾ ಹಾಗೂ ಆಯಿಲ್ ಉತ್ಪಾದನೆಗೆ ಹೆಚ್ಚು ರವಾನೆಯಾಗುತ್ತಿದ್ದು, ವಹಿವಾಟು ಹೆಚ್ಚಿಸಿಕೊಂಡಿದೆ. ಸ್ಥಳೀಯ ವರ್ತಕರ ಹಾಗೂ ರೈತರ ಹಿತ ಕಾಪಾಡುವಲ್ಲಿ ಎಂದಿಗೂ ಬದ್ಧ್ದಾಗಿದ್ದು, ಅನ್ಯಾಯಕ್ಕೆ ಮಣಿಯುವ ಹಾಗೂ ಮೋಸದ ಘಟನೆಗಳಿಗೆ ಆಸ್ಪದ ಕೊಟ್ಟಿಲ್ಲ, ಇಂತಹ ಘಟನೆಗಳಿಗೆ ಎಂದಿಗೂ ರಾಜಿ ಮಾಡಿಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಸ್ಪಷ್ಟಪಡಿಸಿದರು.

    130 ಎಕರೆಗೆ ಪ್ರಸ್ತಾವನೆ:

    ಇಲ್ಲಿನ ಮಾರುಕಟ್ಟೆಯಲ್ಲಿ ವರ್ತಕರ ಹಾಗೂ ರೈತರ ಸಂಖ್ಯೆ ಹೆಚ್ಚಳದಿಂದ ಜಾಗದ ಕೊರತೆಯಾಗಿದೆ. ಮಾರುಕಟ್ಟೆಗೆ ವಾಹನಗಳು ವಿಪರೀತವಾಗಿ ಆಗಮಿಸುತ್ತಿದ್ದು, ರ್ಪಾಂಗ್ ಸಮಸ್ಯೆ ಉಂಟಾಗುತ್ತಿದೆ. ಮಾರುಕಟ್ಟೆ ವಿಸ್ತರಣೆಗೆ ಹಲವು ಬಾರಿ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಕದರಮಂಡಲಗಿ ಬಳಿ ಸುಮಾರು 130 ಎಕರೆ ಜಾಗವನ್ನು ಮಾರುಕಟ್ಟೆ ಅಭಿವೃದ್ಧಿಗೆ ಮಂಜೂರಾತಿ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ಈ ಪೈಕಿ 20 ಎಕರೆ ಹಮಾಲರ ನಿವೇಶನಕ್ಕೆ ಮೀಸಲಿಡಬೇಕಿದೆ. ಇನ್ನುಳಿದಂತೆ ವರ್ತಕರಿಗೆ ನೀಡಬೇಕಿದೆ ಎಂದರು.

    ದಲಾಲರ ಕಷ್ಟದ ಅರಿವಿದೆ:

    ಸ್ಥಳೀಯವಾಗಿ ಹೊಸದಾಗಿ ವ್ಯಾಪಾರ ಮಾಡುತ್ತಿರುವ ಹಾಗೂ ಅಗತ್ಯಕ್ಕನುಗುಣವಾಗಿ ಬೇರೆ ಬೇರೆ ಅಂಗಡಿ ಮಾಡಿದ ವರ್ತಕರಿಗೆ ನಿವೇಶನದ ಸಮಸ್ಯೆಯಿದೆ. ಇದಕ್ಕಾಗಿ ತಾವು ಎಪಿಎಂಸಿ ಕಾರ್ಯಾಲಯ ಬಳಿಯ ಗೋಡೌನ್ ಪ್ರದೇಶ, ಕ್ವಾರ್ಟರ್ಸ ಜಾಗ, ಇತರೆ ಖಾಲಿ ಉಳಿದಿರುವ ಜಾಗವನ್ನು ಗುರುತಿಸಿ ವರ್ತಕರಿಗೆ ನೀಡಲು ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಿಂದ ಯಾವ ವರ್ತಕರೂ ಮೆಗಾ ಮಾರುಕಟ್ಟೆಯತ್ತ ತೆರಳಬಾರದು. ನಿಮ್ಮ ಸಮಸ್ಯೆ ಇತ್ಯರ್ಥಪಡಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದರು.

    ಸಭೆಯಲ್ಲಿ ಭಾಗವಹಿಸಿದ್ದ ನೂರಾರು ವರ್ತಕರು ನಾವು ಸ್ಥಳೀಯ ಮಾರುಕಟ್ಟೆ ಬೆಳೆಸುವ ಮೂಲಕ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ವರ್ತಕರಾದ ಕುಮಾರಗೌಡ್ರ ಪಾಟೀಲ, ಬಸವರಾಜ ಛತ್ರದ, ಮಾಲತೇಶ ಆಲದಗೇರಿ, ಎನ್.ಎಂ. ಕೆಂಬಿ, ರಾಮಣ್ಣ ಉಕ್ಕುಂದ, ಸುರೇಶ ಮೇಲಗಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts