More

    ಮಕ್ಕಳ ಮನಸ್ಸಿಗೆ ಚೈತನ್ಯ ತುಂಬುವ ಕಲೋತ್ಸವ

    ಕುಕನೂರು: ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಗಳು ಮಕ್ಕಳ ಮನಸ್ಸಿಗೆ ಚೈತನ್ಯ ನೀಡುತ್ತವೆ ಎಂದು ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಹೇಳಿದರು.

    ಇದನ್ನೂ ಓದಿ: ಪ್ರತಿಭಾ ಕಾರಂಜಿ, ಕಲೋತ್ಸವ

    ತಾಲೂಕಿನ ಮಸಬಹಂಚಿನಾಳ ಗ್ರಾಮದ ಗೌರಮ್ಮ ಬಸಪ್ಪ ಆಚಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕುಕನೂರು ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

    ಶಾಲೆಯಲ್ಲಿ ಕಲಿಕೆ ಜತೆಗೆ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸುವ ಕಾರ್ಯ ಮುಂದಿನ ಬದುಕಿನ ಭವಿಷ್ಯದ ಸಂಕೇತ. ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಕ್ಕರೆ ಅವರಿಂದ ಖಂಡಿತ ಸಾಧನೆ ಸಾದ್ಯ.

    ಸರ್ಕಾರದಿಂದ ಶೈಕ್ಷಣಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳಿದ್ದು, ಎಲ್ಲರೂ ಅವುಗಳನ್ನು ಬಳಕೆ ಮಾಡಿಕೊಂಡು ಭವಿಷ್ಯ ರೂಪಿಸಕೊಳ್ಳಿ. ಆಸಕ್ತಿದಾಯಕ ವಿಷಯ, ಕಲೆ, ಆಟ, ವಿಜ್ಞಾನಗಳನ್ನು ಆಳವಾಗಿ ಅಧ್ಯಯನ ಮಾಡಬೇಕು ಎಂದರು.

    ಬಿಆರ್‌ಸಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ಬಸವರಾಜ ಅಂಗಡಿ, ಎಸ್ಡಿಎಂಸಿ ಅಧ್ಯಕ್ಷ ಶಿವಪ್ಪ ರಾಜೂರು, ಮುಖ್ಯೋಪಾದ್ಯಾಯರಾದ ಲಿಂಗರಾಜ ಅಬ್ಬಿಗೇರಿ, ಪ್ರಮುಖರಾದ ಹಂಚ್ಯಾಳಪ್ಪ ದೇವರಮನಿ, ಗ್ರಾಪಂ ಸದಸ್ಯ ಹನುಮಂತ ಪೂಜಾರ, ಆನಂದ ಮಾದಿನೂರು, ಪಿಡಿಒ ವೈಜನಾಥ ಸಾರಂಗಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts