More

    ಮಕ್ಕಳ ಕುತೂಹಲ ಅರಿತು ವಿಜ್ಞಾನ ಬೋಽಸಿ

    ಆಯನೂರು: ವಿe್ಞÁನ ಎಂದರೆ ಕುತೂಹಲ. ಮಕ್ಕಳಲ್ಲಿರುವ ಕುತೂಹಲವನ್ನು ಬಳಸಿಕೊಂಡು ಕಲಿಕೆಯಲ್ಲಿ ಹಿಂದುಳಿದವರನ್ನು ಪುನಶ್ಚೇತನಗೊಳಿಸುವಂತೆ ಶಿವಮೊಗ್ಗ ಡಯಟ್ ಪ್ರಾಚಾರ್ಯ ಬಿ.ಆರ್.ಬಸವರಾಜಪ್ಪ ಸಲಹೆ ನೀಡಿದರು.

    ಇಲ್ಲಿನ ಅಗಸ್ತ್ಯ ಕೋರ್ ವಿe್ಞÁನ ಚಟುವಟಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ಪ್ರೌಢಶಾಲಾ ವಿe್ಞÁನ ಶಿಕ್ಷಕರಿಗೆ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಈ ಕೇಂದ್ರದ 20 ಕಿಮೀ ಸುತ್ತಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ರಸಾಯನಶಾಸö, ಜೀವಶಾಸö, ಗಣಿತ ಹೀಗೆ ಅನೇಕ ವಿಷಯಗಳಿಗೆ ಚಟುವಟಿಕೆ ಆಧಾರಿತ ಕಲಿಕೆಯನ್ನು ಬೋಽಸಲಾಗುವುದು ಎಂದರು.
    ಹೊರಸAಚಾರಕ್ಕೆAದು ಹೋಗುವುದಾದರೆ ತಮ್ಮ ಶಾಲೆಯ ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬನ್ನಿ. ಕೇಂದ್ರದಲ್ಲಿ ಹಲವು ಜನ ಶಿಕ್ಷಕರಿದ್ದು ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಿ ಚಟುವಟಿಕೆಯ ಮೂಲಕ ಬೋಽಸುವರು. ಕೇಂದ್ರದಿAದ ಬಸ್ಸಿನ ಸೌಕರ್ಯವೂ ಇದ್ದು ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇರಲಿದೆ. ನಮ್ಮ ಕೇಂದ್ರದ ವ್ಯಾಪ್ತಿ ಇರುವುದು ಕೇವಲ 20 ಕಿಮೀ ಅಷ್ಟೇ. ಆದರೆ ಈ ವರ್ಷ ಸಾಗರ, ಆನಂದಪುರ, ಹೊಸನಗರ ಹಾಗೂ ತೀರ್ಥಹಳ್ಳಿ ಭಾಗದಿಂದ ಕೆಲವು ಶಾಲೆಗಳ ಮಕ್ಕಳನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡÀಲಾಗಿದೆ. ಲ್ಯಾಬï ಹಾಗೂ ಇರುವ ವಸ್ತುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಬುದ್ಧಿಮಟ್ಟವನ್ನು ಹೆಚ್ಚಿಸಬೇಕು ಎಂದು ಹೇಳಿದರು.
    ಸಂಪನ್ಮೂಲ ವ್ಯಕ್ತಿಯಾಗಿ ಇಳಕಲï ಎಸ್‌ವಿಎಂ ಕಲಾ, ವಿe್ಞÁನ ಮತ್ತು ವಾಣಿಜ್ಯ ಕಾಲೇಜಿನ ಡಾ. ಪಿ.ಎಸ್.ಕಂದಗಲï ಆಗಮಿಸಿದ್ದರು. ಡಯಟ್ ಹಿರಿಯ ಉಪನ್ಯಾಸಕಿ ಟಿ.ಐ.-Áತೀಮಾ, ಜಿ.ಇ.ರಾಜೀವ್, ಅಶ್ವಿನ್, ಅಸುಂತ ಸಿಕ್ವೇರಾ, ಅಗಸ್ತ್ಯ ಕೇಂದ್ರದ ಸಂಯೋಜಕ ಸುನೀಲï, ಸರ್ಕಾರಿ ಪ್ರೌಢಶಾಲೆ ಉಪ ಪ್ರಾಚಾರ್ಯ ಛೋಪ್ದಾರ್ ಇದ್ದರು. ಎನ್.ಕೆ.ಶಕುಂತಲಾ ಕಾರ್ಯಕ್ರಮ ನಿರೂಪಿಸಿದರು. ಡಯಟ್ ಉಪನ್ಯಾಸಕ ಮಂಜಪ್ಪ ಸ್ವಾಗತಿಸಿದರು. ಉಪನ್ಯಾಸಕಿ ಕೆ.ವೀಣಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts