More

    ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ ಸದ್ಬಳಕೆ ಮಾಡಿಕೊಂಡರೆ ಉಜ್ವಲ ಭವಿಷ್ಯ

    ಅಳವಂಡಿ: ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಜ್ಞಾನ ವೃದ್ಧಿಸುವ ಕೆಲಸವನ್ನು ಕಲಿಕಾ ಟಾಟಾ ಟ್ರಸ್ಟ್ ಮಾಡುತ್ತಿದ್ದು, ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಟ್ರಸ್ಟ್ ಪ್ರೋಗ್ರಾಂ ಕೋ-ಆರ್ಡಿನೇಟರ್ ಮೃತ್ಯುಂಜಯ ತಿಳಿಸಿದರು.

    ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಟಾಟಾ ಟ್ರಸ್ಟ್ ಆಯೋಜಿಸಿದ್ದ ಕಲಿಕಾ ಚೇತನ ಹಾಗೂ ಮಕ್ಕಳ ಪಾಲಕರ ಸಭೆಯಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಹಲವು ಸಂಘ ಸಂಸ್ಥೆಗಳು, ಟ್ರಸ್ಟ್‌ಗಳು ಶ್ರಮಿಸುತ್ತಿವೆ. ಅದರ ಜತೆಗೆ ಸರ್ಕಾರ ನೀಡುವ ಶೈಕ್ಷಣಿಕ ಸೌಲಭ್ಯ ಬಳಸಿಕೊಂಡು ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದರು.

    ಮುಖ್ಯ ಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಮಾತನಾಡಿ, ಪಾಲಕರು, ಸಮುದಾಯ, ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಶೈಕ್ಷಣಿಕ ಪ್ರಗತಿ ಸಾಧ್ಯ. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಅವರ ಶಿಕ್ಷಣದ ಪ್ರಗತಿ ಬಗ್ಗೆ ಶಾಲೆಗೆ ಬಂದು ವಿಚಾರಿಸಬೇಕು. ಆಗ ಮಾತ್ರ ಮಕ್ಕಳ ಶಿಕ್ಷಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

    ಮಕ್ಕಳಿಗೆ ಟ್ರಸ್ಟ್‌ನಿಂದ ಉಚಿತ ಪೆನ್, ನೋಟಬುಕ್ ಇತರ ಶೈಕ್ಷಣಿಕ ಸಲಕರಣೆಗಳನ್ನು ವಿತರಿಸಲಾಯಿತು. ಕಲಿಕಾ ಟಾಟಾ ಟ್ರಸ್ಟ್ ಪ್ರೇರಕರಾದ ನೇತ್ರಾವತಿ ಆನಂದಳ್ಳಿ, ಶಿಕ್ಷಕರಾದ ಹನುಮಂತಪ್ಪ ಕಟಾಂಬ್ಲಿ, ಕೃಷ್ಣಪ್ಪ ತಳಕಲ್, ಬಸವರಾಜ ರಡ್ಡೇರ, ಹೊಳಿಬಸಯ್ಯ ಕಾಟ್ರಳ್ಳಿ, ಪ್ರಮುಖರಾದ ಶಂಕರಗೌಡ ಪೋಲಿಸ್ ಪಾಟೀಲ, ನಂದೀಶ ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts