More

    ಬಾಲ್ಯ ವಿವಾಹ ತಡೆಗೆ ಬದ್ಧರಾಗಿ

    ಕಂಪ್ಲಿ: ಬಾಲ್ಯವಿವಾಹ ತಡೆಯುವಲ್ಲಿ ಕಾನೂನಿನ ಪಾತ್ರಕ್ಕಿಂತ ಸಮುದಾಯದ ಪಾತ್ರ ಬಹು ಮುಖ್ಯ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಬಿ.ವಾಸುಕುಮಾರ್ ಹೇಳಿದರು.

    ಇದನ್ನೂ ಓದಿ: ಮಾಂಗಲ್ಯ ಭಾಗ್ಯ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ

    ಪಟ್ಟಣದ ಮದರ್ ತೆರೆಸಾ ಕಾಲೇಜಿನಲ್ಲಿ ಜೆಸಿಐ ಕಂಪ್ಲಿ ಸೋನಾ ಶುಕ್ರವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಮುದಾಯವು ಆಧುನಿಕತೆಗೆ ತಕ್ಕಂತೆ ಕಾನೂನಿಗೆ ಅನ್ವಯವಾಗುವ ಪರಂಪರೆಯನ್ನು, ತತ್ವಾದರ್ಶಗಳನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಕಾನೂನು ಸಮಾಜದ ಒಳಿತನ್ನು ಬಯಸುತ್ತದೆ ಎಂದರು.

    ಮಕ್ಕಳ ಸಹಾಯವಾಣಿ ತಾಲೂಕು ಸಂಯೋಜಕ ಚಿದಾನಂದ ಮಾತನಾಡಿ, ಮಕ್ಕಳ ಸಹಾಯವಾಣಿ 1098 ಸಹಾಯದಿಂದ ಬಾಲ್ಯವಿವಾಹ ಸೇರಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲಾಗಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಸರ್ವರೂ ಬದ್ಧರಾಗಬೇಕು ಎಂದರು.

    ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ಆಯುಷ್ ವೈದ್ಯ ಮಲ್ಲೇಶಪ್ಪ, ಕಾಲೇಜಿನ ಪ್ರಾಚಾರ್ಯರಾದ ಮಹಾಬಲೇಶ್ವರಪ್ಪ, ಮದ್ದಾನಪ್ಪ, ಪಿಎಸ್‌ಐ ಬಸವರಾಜ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts