ಬರೇಲಿ: ಹಿತ್ತಲಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಹಾವಿನ ಮರಿಯನ್ನೇ ನುಂಗಿದೆ…! ಫತೇಗಂಜ್ನ ಬೋಲಾಪುರಗ್ರಾಮದಲ್ಲಿ ಈ ಘಟನೆ ನಡೆದಿದೆ.
ಒಂದು ವರ್ಷದ ಮಗು ನೆಲದ ಬಿದ್ದಿದ್ದ ವಸ್ತುವನ್ನೇನೋ ಬಾಯಿಗಿಟ್ಟುಕೊಂಡಿದೆ ಎಂದು ತಾಯಿ ಎಂದುಕೊಂಡಿದ್ದಳು. ಆದರೆ, ಮಗುವಿನ ಬಳಿ ಬಂದು, ಬಾಯನ್ನು ಅಗಲಿಸಿ ಹೊರಕ್ಕೆಳೆದಾಗ ಅಚ್ಚರಿಗೊಳಗಾಳಗುವ ಸರದಿ ಆಕೆಯದ್ದಾಗಿತ್ತು.
ಮಗುವಿನ ಬಾಯಿಯಲ್ಲಿದ್ದ ಹಾವನ್ನು ಹೊರಗೆಳೆದ ತಾಯಿ, ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಪರೀಕ್ಷೆ ನಡೆಸಿದ ವೈದ್ಯರು, ವಿಷ ನಿವಾರಿಸುವ ಇಂಜೆಕ್ಷನ್ ನೀಡಿದ್ದಾರೆ.
ಇದನ್ನೂ ಓದಿ; 19 ಲಕ್ಷ ರೂ. ಮೌಲ್ಯದ ಹ್ಯಾಂಡ್ ಬ್ಯಾಗ್…! ಅಧಿಕಾರಿಗಳು ನಿರ್ದಯವಾಗಿ ಧ್ವಂಸಗೊಳಿಸಿದ್ದೇಕೆ?
ಅಂದಾಜು ಆರು ಅಂಗುಲ ಉದ್ದವಿದ್ದ ಹಾವು ಬಾಯಿಯಿಂದ ಹೊರಗೆಳೆದಾಗ ಸತ್ತು ಹೋಗಿತ್ತು. ಅದನ್ನು ಕೂಡ ಮಗುವಿನ ತಂದೆ ಧರ್ಮಪಾಲ್ ಆಸ್ಪತ್ರೆಗೆ ತಂದಿದ್ದರು.
ಅದೊಂದು ಕ್ರೈಟ್ ಜಾತಿಯ ಅತ್ಯಂತ ವಿಷಕಾರಿ ಹಾವಿನ ಮರಿಯಾಗಿತ್ತು. ಆದರೆ, ಮಗುವಿಗೆ ಕೂಡಲೇ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಕರೊನಾ ಮರು ಸೋಂಕು; ತಿಂಗಳ ಬಳಿಕ ಮತ್ತೆ ಕೋವಿಡ್; ಬೆಂಗಳೂರಿನಲ್ಲಿ ಪತ್ತೆಯಾಯ್ತು ಮೊದಲ ಪ್ರಕರಣ…!