More

    ಬಾಲ್ಯ ವಿವಾಹ ಕಾರಣ ಪತ್ತೆಗೆ ಸಮಿತಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಏನು ಕಾರಣ ಎಂಬುದನ್ನು ತಿಳಿಯಲು ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಒಂದು ತಿಂಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು.

    ತಾಪಂ ಇಒ, ಬಿಇಒ, ಟಿಎಚ್​ಒ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಪಿಎಸ್​ಐ ಅವರನ್ನೊಳಗೊಂಡು ಸತ್ಯಶೋಧನಾ ಸಮಿತಿ ರಚಿಸಲಾಗಿದೆ.

    ಗುರುವಾರ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಡಾ.ಅಂತೋಣಿ ಸೆಬಾಸ್ಟಿಯನ್, ಬುಡಕಟ್ಟು ಜನ ವಾಸಿಸುವ ಹಾಗೂ ಮೂಲ ಸೌಕರ್ಯ ವಂಚಿತ ಪ್ರದೇಶಗಳಿಗೆ ಸತ್ಯಶೋಧನಾ ಸಮಿತಿ ಭೇಟಿ ನೀಡಿ, ಅಲ್ಲಿನ ಜನರು ಎಷ್ಟು ವರ್ಷಗಳಿಂದ ವಾಸವಿದ್ದಾರೆ? ಪಡಿತರ, ಆಧಾರ್ ಚೀಟಿ ಪಡೆದಿದ್ದಾರೆಯೇ? ಬಾಲ್ಯವಿವಾಹ ಪ್ರಕರಣಕ್ಕೂ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗೂ ಸಂಬಂಧವಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕೆಂದರು.

    ಗ್ರಾಮಸಭೆ ಪರಿಣಾಮಕಾರಿಯಾಗಲಿ: ಗ್ರಾಪಂ ಏರ್ಪಡಿಸá-ವ ಮಕ್ಕಳ ಗ್ರಾಮ ಸಭೆಗಳು ಪರಿಣಾಮಕಾರಿಯಾಗಬೇಕು. ಸಭೆಯಲ್ಲಿ ಕೇಳಿ ಬರುವ ಮಕ್ಕಳ ಬೇಡಿಕೆಗಳು ಗ್ರಾಪಂ ಕ್ರಿಯಾ ಯೋಜನೆಗೆ ಸೇರ್ಪಡೆಯಾಗಬೇಕು. ಮಕ್ಕಳ ಗ್ರಾಮಸಭೆ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ಗಮನಸೆಳೆದಿದೆ. ಜಿಲ್ಲೆಯಲ್ಲಿ ಇದು ಇನ್ನಷ್ಟು ಯಶಸ್ವಿಯಾಗಿ ಅನುಷ್ಠಾನವಾಗಬೇಕು ಎಂದು ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ತಿಳಿಸಿದರು.

    ಜಿಪಂ ಸಿಇಒ ಎಂ.ಎಲ್.ವೈಶಾಲಿ ಮಾತನಾಡಿ, ಚುನಾವಣಾ ಆಯೋಗ ಯಾವ ಸಂದರ್ಭದಲ್ಲಿ ಬೇಕಾದರೂ ಗ್ರಾಪಂ ಚುನಾವಣೆ ಘೊಷಣೆ ಮಾಡುವ ಸಾಧ್ಯತೆಗಳಿವೆ. ಚುನಾವಣೆ ನೀತಿ ಸಂಹಿತೆ ಜಾರಿಯಾದರೆ ಮಕ್ಕಳ ಗ್ರಾಮಸಭೆ ನಡೆಸಲು ಅವಕಾಶವಿರುವುದಿಲ್ಲ. ಹೀಗಾಗಿ ಮಕ್ಕಳ ಗ್ರಾಮಸಭೆಗಳನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಅವಧಿಗೆ ಪೂರ್ವದಲ್ಲಿಯೇ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಿ.ಶಂಕರಪ್ಪ, ಎಂ.ಎಲ್.ಪರಶುರಾಮ್ ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಎಎಸ್ಪಿ ಡಾ.ಎಚ್.ಟಿ.ಶೇಖರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಭಾರ ಉಪನಿರ್ದೇಶಕ ಸಿ.ಸುರೇಶ್, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ಜಿ.ಎಂ.ರೇಖಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts