More

    ಶಾಲೆ ಪ್ರಾರಂಭವಾಗುವುದು ತಡವಾದಷ್ಟೂ ಬಾಲ್ಯ ವಿವಾಹಗಳು ಹೆಚ್ಚಾಗುತ್ತವೆ…!

    ಬೆಂಗಳೂರು: ಕರೊನಾದಿಂದ ಬಾಗಿಲು ಮುಚ್ಚಿದ್ದ ಶಾಲೆಗಳನ್ನು ಮತ್ತೆ ತೆರೆಯುವ ಸಿದ್ಧತೆಗಳು ಶುರುವಾಗಿದೆ. ದಿನಾಂಕ ನಿಗದಿ ಆಗದೆ ಇದ್ದರೂ ಶಿಕ್ಷಣ ಇಲಾಖೆ ಎಸ್​​ಒಪಿ ಬಿಡುಗಡೆ ಮಾಡಿದೆ. ಅಷ್ಟೇ ಏಕೆ..ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಶಾಲೆಗಳ ಪುನರಾರಂಭದ ಕುರಿತು ಸಲಹೆ, ಅಭಿಪ್ರಾಯಗಳನ್ನು ಕೇಳಿ ರಾಜ್ಯದ ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

    ಕರೊನಾ ಸೋಂಕಿನ ಪ್ರಮಾಣವೂ ಹೆಚ್ಚುತ್ತಿದೆ. ಹೀಗಿರುವಾಗ ಶಾಲೆಗಳನ್ನು ತೆರೆಯುವುದು ಎಷ್ಟು ಸರಿ ಎಂಬ ಬಲವಾದ ಚರ್ಚೆ ಈಗ ರಾಜ್ಯದೆಲ್ಲೆಡೆ ಶುರುವಾಗಿದೆ. ಪಾಲಕವರ್ಗದ ವಿರೋಧ ಹೆಚ್ಚುತ್ತಿದ್ದಂತೆ ಸುರೇಶ್​ ಕುಮಾರ್​ ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

    ಬೀದರ್​ ನಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ, ಪಿಯುಸಿ ತರಗತಿಗಳು ಆರಂಭವಾಗುವುದು ತಡವಾದಷ್ಟೂ ಬಾಲ್ಯವಿವಾಹಗಳು ಹೆಚ್ಚುತ್ತವೆ. ಇಂಥ ಪ್ರಕರಣಗಳು ಪಿರಿಯಾಪಟ್ಟಣ ಮತ್ತಿತರ ಕಡೆಯಿಂದ ವರದಿಯಾಗಿದೆ. ಹಾಗಾಗಿ ಶಾಲೆಗಳ ಮರು ಆರಂಭದ ಕುರಿತು ಶಾಸಕರ ಅಭಿಪ್ರಾಯ ಕೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಅರೆ ಇದೆಂಥ ಆಘಾತ! ಕರ್ನಾಟಕಕ್ಕೂ ಕಾಲಿಟ್ಟುಬಿಟ್ಟಿದೆ ಹೊಸ ಚೀನಿ ವೈರಸ್​- ಇಬ್ಬರಲ್ಲಿ ಪತ್ತೆ!

    ಬಾಲ್ಯ ವಿವಾಹ ಮಾತ್ರವಲ್ಲ..ಬಾಲಕಾರ್ಮಿಕರ ಪದ್ಧತಿಗಳೂ ಹೆಚ್ಚುತ್ತಿವೆ. ಶಾಲೆ ಇಲ್ಲದೆ ಇರುವುದರಿಂದ ಪಾಲಕರು ಮಕ್ಕಳನ್ನು ಕೆಲಸಕ್ಕೆ ಕಳಿಸುತ್ತಿದ್ದಾರೆ. ಇದೆಲ್ಲ ಆತಂಕಕಾರಿ ವಿಚಾರವಾಗಿದ್ದು, ಈ ಬಗ್ಗೆ ಚರ್ಚಿಸಲು ನಾಳೆ ಅಥವಾ ನಾಡಿದ್ದು ಶಿಕ್ಷಣ ತಜ್ಞರು ಮತ್ತು ಸಂಬಂಧಪಟ್ಟವರ ಸಭೆ ನಡೆಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

    ನಾನೀಗ ಬೀದರ್ ಜಿಲ್ಲೆಯ ಪ್ರವಾಸದಲ್ಲಿದ್ದು ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುತ್ತೇನೆ. ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು‌ ಮತ್ತೊಮ್ಮೆ ಸ್ಪಷ್ಟವಾಗಿ ಹೇಳಿದ್ದಾರೆ.

    ಶಾಲಾ-ಕಾಲೇಜುಗಳ ಪ್ರಾರಂಭ ಕುರಿತು ಫೇಸ್​ಬುಕ್​ನಲ್ಲಿ ಅಭಿಪ್ರಾಯ ತಿಳಿಸಿದ ಶಿಕ್ಷಣ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts