More

    ಹಣಕ್ಕಾಗಿ ಅಪ್ರಾಪ್ತೆಯ ಮದುವೆ

    ಹುಬ್ಬಳ್ಳಿ: ತಾಲೂಕಿನ ಪರಸಾಪುರ ಗ್ರಾಮದಲ್ಲಿ ಅಪ್ರಾಪ್ತಳನ್ನು ಒತ್ತಾಯಪೂರ್ವಕವಾಗಿ ಜಮಖಂಡಿ ತಾಲೂಕಿನ ಸಾವಳಗಿಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹಣಕ್ಕಾಗಿ ತಂಡವೊಂದು ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

    ಹುಬ್ಬಳ್ಳಿ ತಾಲೂಕಿನ ಪರಸಾಪುರ ಮತ್ತು ಗದಗ ತಾಲೂಕಿನ ಅಂತೂರು- ಬೆಂತೂರಿನ ನಾಲ್ವರು ಸೇರಿ ಬಾಲಕಿಯನ್ನು ಅನ್ಯಧರ್ಮದ ವ್ಯಕ್ತಿಗೆ ಮದುವೆ ಮಾಡಿಸಿದ್ದಾಗಿ ಸಂತ್ರಸ್ತೆ ದೂರು ಕೊಟ್ಟಿದ್ದಾರೆ. ಅಂತೂರು- ಬೆಂತೂರಿನ ಬಾಲಕಿ ಸಂಬಂಧಿಕರ ನಿಶ್ಚಿತಾರ್ಥಕ್ಕೆ ಬಂದಾಗ ಕೆಲವರು ಪುಸಲಾಯಿಸಿ ಪರಸಾಪುರಕ್ಕೆ ಕರೆದೊಯ್ದಿದ್ದಾರೆ.

    ಅಲ್ಲಿ ಮಾರ್ಚ್ 27ರಂದು ಸಾವಳಗಿಯ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ. ಮುದುವೆಯಾದವ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಗದಗ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

    ಆಕೆಯ ಮದುವೆ ತಾಲೂಕಿನ ಪರಸಾಪುರದಲ್ಲಿ ಜರುಗಿದ ಹಿನ್ನೆಲೆ ಪ್ರಕರಣವನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts