More

    ಮಗು ಸೇರಿ ದಂಪತಿ ದುರ್ಮರಣ

    ಘಟಪ್ರಭಾ: ಗೋಕಾಕ ತಾಲೂಕಿನ ಸಂಗನಕೇರಿ-ಕಲ್ಲೋಳಿ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ 5 ತಿಂಗಳ ಮಗು ಸೇರಿ ದಂಪತಿ ಮೃತಪಟ್ಟಿದ್ದಾರೆ. ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸದಾಶಿವ ದುರ್ಗಪ್ಪ ಗಾಣಿಗೇರ(30), ಪತ್ನಿ ಸಕ್ಕೂಬಾಯಿ ಗಾಣಿಗೇರ (28) ಹಾಗೂ 5 ತಿಂಗಳ ಮಗು ಸೃಷ್ಟಿ ಮೃತ ದುರ್ದೈವಿಗಳು.

    ದೇವಸ್ಥಾನಕ್ಕೆ ಆಗಮಿಸಿದ್ದ ದಂಪತಿ, ಸಂಗನಕೇರಿ ಕಡೆಯಿಂದ ಹಿಡಕಲ್ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರು ಬರುತ್ತಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಹಿಂದಿಕ್ಕಿ ವೇಗವಾಗಿ ಬರುತ್ತಿದ್ದ ಕ್ರೂಸರ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ದಂಪತಿ, ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts